ಚಿತ್ರದುರ್ಗ, (ಡಿ.18): ನಮ್ಮ ಬ್ಯಾಂಕ್ ನಿಮ್ಮ ಮನೆ ಬಾಗಿಲಿಗೆ ಎಂಬ ಧ್ಯೇಯದೊಂದಿಗೆ ಗ್ರಾಹಕರ ಮನೆ ಬಾಗಿಲಿಗೆ ಸೇವೆಯನ್ನು ಕಲ್ಪಿಸುವ ಸಹಕಾರಿ ಸಂಚಾರಿ ಬ್ಯಾಂಕಿಂಗ್ ವಾಹನವನ್ನು ಚಿತ್ರದುರ್ಗ ಡಿ.ಸಿ.ಸಿ ಬ್ಯಾಂಕಿನಲ್ಲಿ ಉದ್ಘಾಟಿಸಲಾಯಿತು.
ನಗರದ ಡಿ.ಸಿ.ಸಿ ಬ್ಯಾಂಕಿನ ಆವರಣದಲ್ಲಿ
ಬ್ಯಾಂಕಿನ ಅಧ್ಯಕ್ಷರಾದ ಡಿ.ಸುಧಾಕರ್ ಚಾಲನೆ ನೀಡಿ ಮಾತನಾಡಿದರು. ಬ್ಯಾಂಕಿನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಚಿತ್ರದುರ್ಗ ಡಿ.ಸಿ.ಸಿ ಬ್ಯಾಂಕ್ ನಬಾರ್ಡ್ ಸಹಾಯದೊಂದಿಗೆ ಮೊಬೈಲ್ ATM ವ್ಯಾನ್ ನ್ನು ಖರೀದಿಸಿದ್ದು ಸದರಿ ಮೊಬೈಲ್ ATM ವ್ಯಾನ್ ನ್ನು ಜಿಲ್ಲೆಯ ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋಗಿ ಬ್ಯಾಂಕಿನ ರೈತ ಸದಸ್ಯರಿಗೆ ಹಾಗೂ ಬ್ಯಾಂಕಿನ ಇತರೇ ಗ್ರಾಹಕರಿಗೆ ಅವರು ಇರುವ ಸ್ಥಳದಲ್ಲೇ ಮೊಬೈಲ್ ATM ವ್ಯಾನ್ ನಲ್ಲಿರುವ ATM ಮೂಲಕ ನಗದು ಹಣ ಡ್ರಾ ಮಾಡುವುದು.
BHARATH BILL PAYMENT SYSTEM
(BBPS) ಮೂಲಕ ವ್ಯಾನ್ ನಲ್ಲಿ ಸ್ಥಾಪಿಸಿರುವ ಮಷಿನ್ ಮೂಲಕ ಬಿಲ್ ಪೇಮೆಂಟ್‍ಗಳಾದ ಕರೆಂಟ್ ಬಿಲ್ ಕಟ್ಟುವುದು. ಮೊಬೈಲ್ ಬಿಲ್ ಕಟ್ಟುವುದು, ಡಿ.ಟಿ.ಹೆಚ್ (ಡಿಶ್) ಕರೆನ್ಸಿ ಹಾಕಿಸುವುದು ಹಾಗೂ ಇತರೇ ಸೌಲಭ್ಯಗಳನ್ನು ನೀಡಲಾಗುತ್ತದೆ. ಹಾಗೂ ಸಾರ್ವಜನಿಕರು ಬ್ಯಾಂಕುಗಳಿಗೆ ಬಾರದೇ ಹಳ್ಳಿಗಳಲ್ಲಿಯೇ ಎಸ್‍ಬಿ ಅಕೌಂಟ್ ತೆರೆಯಲು ಸಹ ವ್ಯವಸ್ಥೆ ಮಾಡಲಾಗಿದೆ, ಹಾಗೂ ಬ್ಯಾಂಕಿನ ಮೂಲಕ ಯಾವ ಯಾವ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬ ಬಗ್ಗೆ ಹಳ್ಳಿ ಹಳ್ಳಿಯಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು. ಹಾಗೂ ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಸಹ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಹೆಚ್.ಬಿ.ಮಂಜುನಾಥ, ನಿರ್ದೇಶಕರುಗಳಾದ, ಎಸ್.ಆರ್.ಗಿರೀಶ್, ಟಿ.ಮಹಾಂತೇಶ್, ಹೆಚ್.ಟಿ.ನಾಗರೆಡ್ಡಿ, ನಿಶಾನಿ ಜಯಣ್ಣ, ಸಿ.ವೀರಭದ್ರ ಬಾಬು, ಡಿ.ಎಸ್.ಶಶಿಧರ್, ಕೆ.ಜಗಣ್ಣ, ಶ್ರೀಮತಿ ಪಿ.ವಿನೋದ ಸ್ವಾಮಿ, ರಘುರಾಮರೆಡ್ಡಿ, ಬಿ.ಶಿವಲಿಂಗಪ್ಪ, ಹೆಚ್.ಎಂ.ದ್ಯಾಮಣ್ಣ, ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಷರೀಷ್ ಉಪಸ್ಥಿತರಿರುವುದು.