ದಾವಣಗೆರೆ | ಸೆಪ್ಟೆಂಬರ್ 4 ಮತ್ತು 5 ರಂದು ಸಂಚಾರ ಮಾರ್ಗ ಬದಲಾವಣೆ

3 Min Read

 

ದಾವಣಗೆರೆ. ಸೆ.02: ದಾವಣಗೆರೆ ನಗರದ ವಿನೋಬ ನಗರದಲ್ಲಿ ಪ್ರತಿಷ್ಟಾಪಿಸಿರುವ ವರಸಿದ್ದಿ ವಿನಾಯಕ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೆಪ್ಟೆಂಬರ್ 4 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅಂದು ಬೆಳಿಗ್ಗೆ 11 ರಿಂದ ರಾತ್ರಿ 11 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಹರಿಹರದಿಂದ ದಾವಣಗೆರೆಗೆ ಹಳೆ ಪಿಬಿ ರಸ್ತೆಯ ಮೂಲಕ ಬರುವ ಎಲ್ಲಾ ಭಾರಿ ವಾಹನ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌ಹೆಚ್-48 ರಸ್ತೆಯಿಂದ ಹಾಗೂ ಚಿತ್ರದುರ್ಗ ಕಡೆಯಿಂದ ಬರುವ ಎಲ್ಲಾ ವಾಹನಗಳು ಸಹ ಆವರಗೆರೆ ಹತ್ತಿರದ ಬಾಡಾಕ್ರಾಸ್ ಮುಖಾಂತರ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೇಟ್ ಕ್ರಾಸ್‌ನಿಂದ ಎಪಿಎಂಸಿ ಗೆ ಹೋಗುವುದು. ಕೆಎಸ್‌ಆರ್‌ಟಿಸಿ ಬಸ್‌ಗಳು ಅದೇ ಮಾರ್ಗವಾಗಿ ಬಾಡಾಕ್ರಾಸ್ ಮುಖಾಂತರ ಆವರಗೆರೆ ಕಡಿಯಿಂದ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಬೆಂಗಳೂರು ಬೆಳಗಾವಿ ಕಡೆಗೆ ಹೋಗುವುದು.

 

ಬಸ್‌ಗಳು ಖಾಸಗಿ ಬಸ್‌ಗಳು ಸಹ ಅದೇ ಆರ್ಗವಾಗಿ ಬಂದು ಎಂ.ಜಿ ಸರ್ಕಲ್ ಮುಖೇನ ನೂತನ ಖಾಸಗಿ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ನಿರ್ಗಮಿಸಲು ಸೂಚಿಸಿದೆ.
ಜಿಎಂಐಟಿ ಕಾಲೇಜ್ ಹತ್ತಿರ ತಾತ್ಕಾಲಿಕ ರಸ್ತೆಯ ಬದಿಯಲ್ಲಿ ನಿಲ್ಲಿಸುವಂತಹ ಗೂಡ್ಸ್ ಲಾರಿಗಳನ್ನು ಹಳೇ ಪಿಬಿ ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸದೇ ದೂರದಲ್ಲಿ ಖಾಸಗಿ ಪಾರ್ಕಿಂಗ್ ವ್ಯವಸ್ಥೆ ಮಾಡಕೊಳ್ಳಬೇಕು. ನಗರದ ನೂತನ ಖಾಸಗಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳುವ ಬಸ್‌ಗಳು ಎಸಿ ಕಚೇರಿ ವೃತ್ತದಿಂದ ಅರುಣ ಸರ್ಕಲ್ ಮುಖಾಂತರ ಹರಿಹರದ ಕಡೆಗೆ ಹಳೇ ಪಿಬಿ ರಸ್ತೆಗೆ ಬಾರದೇ ಗಾಂಧಿ ವೃತ್ತದ ಮೂಲಕ ಹದಡಿ ರಸ್ತೆ ಯಿಂದ ಕಾರ್ಯಚರಣೆಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

 

ಸೆಪ್ಟೆಂಬರ್ 05ರಂದು ಈದ್‌ಮಿಲಾದ್ ಹಬ್ಬದ ಆಚರಣೆ: ಸಂಚಾರ ಮಾರ್ಗ ಬದಲಾವಣೆ

ಸೆಪ್ಟೆಂಬರ್ 5 ರಂದು ಈದ್‌ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಕಡೆ ಮೆರವಣಿಗೆ ನಡೆಸುವುದರಿಂದ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಂದು ಬೆಳಗ್ಗೆ 11 ರಿಂದ ರಾತ್ರಿ 11 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ಆದೇಶಿಸಿದ್ದಾರೆ.

ಹರಿಹರದಿಂದ ದಾವಣಗೆರೆಗೆ ಹಳೆ ಪಿಬಿ ರಸ್ತೆಯ ಮೂಲಕ ಬರುವ ಎಲ್ಲಾ ಭಾರಿ ವಾಹನ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌ಹೆಚ್-48 ರಸ್ತೆಯಿಂದ ಹಾಗೂ ಚಿತ್ರದುರ್ಗ, ಕಡೆಯಿಂದ ಬರುವ ಎಲ್ಲಾ ವಾಹನಗಳು ಸಹ ಆವರಗೆರೆ ಹತ್ತಿರದ ಬಾಡಾಕ್ರಾಸ್ ಮುಖಾಂತರ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೇಟ್ ಕ್ರಾಸ್‌ನಿಂದ ಎಪಿಎಂಸಿ ಗೆ ಹೋಗುವುದು. ಕೆಎಸ್‌ಆರ್‌ಟಿಸಿ ಬಸ್‌ಗಳು ಅದೇ ಮಾರ್ಗವಾಗಿ ಬಾಡಾಕ್ರಾಸ್ ಮುಖಾಂತರ ಆವರಗೆರೆ ಕಡಿಯಿಂದ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಬೆಂಗಳೂರು ಬೆಳಗಾವಿ ಕಡೆಗೆ ಹೋಗುವುದು.

ಬಸ್‌ಗಳು ಖಾಸಗಿ ಬಸ್‌ಗಳು ಸಹ ಅದೇ ಆರ್ಗವಾಗಿ ಬಂದು ಎಂ.ಜಿ ಸರ್ಕಲ್ ಮುಖೇನ ನೂತನ ಖಾಸಗಿ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ನಿರ್ಗಮಿಸಲು ಸೂಚಿಸಿದೆ. ಚನ್ನಗಿರಿ ಮಾರ್ಗವಾಗಿ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬಾಡಾಕ್ರಾಸ್ ಮೂಲಕ ಆವರಗೆರೆ ಕಡೆಯಿಂದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ಹಿಂತಿರುಗಬೇಕು. ಖಾಸಗಿ ಬಸ್‌ಗಳು ಮಾಗನೂರು ಬಸಪ್ಪ ಪೆಟ್ರೋಲ್ ಬಂಕ್ ಹತ್ತಿರದ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಕಲ್ಪಿಸಿದೆ.

ಚನ್ನಗಿರಿ ಕಡೆಯಂದ ಬರುವ ಸರಕು ವಾಹನಗಳು ಸಹ ಅದೇ ಮಾರ್ಗವಾಗಿ ತೆರಳಿ ಎಪಿಎಂಸಿ ಮಾರ್ಕೇಟ್‌ನಲ್ಲಿ ಪಾರ್ಕಿಂಗ್ ಮಾಡಬೇಕು. ಜಗಳೂರು ಮತ್ತು ಹರಪನಹಳ್ಳಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ಹಿಂತಿರುಗುವುದು. ಹಾಗೆಯೇ ಈ ಎರಡು ಮಾರ್ಗಗಳಿಂದ ಬರುವ ಖಾಸಗಿ ಬಸ್ ವೆಂಕಟೇಶ್ವರ ವೃತ್ತ, ಗಣೇಶ ಹೋಟೆಲ್ ವೃತ್ತ ಮುಖಾಂತರ ಎಪಿಎಂಸಿ ಮಾರ್ಕೆಟ್‌ನಲ್ಲಿ ಪಾರ್ಕಿಂಗ್ ಮಾಡಲು ಸೂಚಿಸಿದೆ. ಸರಕು ಲಾರಿಗಳು ಸಹ ಇದೇ ಮಾರ್ಗವಾಗಿ ಹಾಗೂ ಕೊಂಡಜ್ಜಿ ಕಡೆಯಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ರಿಂಗ್ ರಸ್ತೆ ಮತ್ತು ಬಂಬೂ ಬಜಾರ್ ಮುಖಾಂತರ ನೂತನ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ವಾಪಸ್ ಹೋಗುವುದು. ಖಾಸಗಿ ಬಸ್‌ಗಳು ಅದೇ ಮಾರ್ಗವಾಗಿ ಬಂದು ಎಪಿಎಂಸಿ ಮಾರ್ಕೇಟ್ ನಲ್ಲಿ ಪಾರ್ಕಿಂಗ್ ಹಾಗೂ ಸರಕು ವಾಹನಗಳು ಸಹ ಇದೇ ಮಾರ್ಗವಾಗಿ ಸಂಚರಿಸಿ ಎಪಿಎಂಸಿ ಮಾರ್ಕೇಟ್‌ಗೆ ಸಂಚರಿಸಲು ಡಿಸಿ ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *