ದಾವಣಗೆರೆ | ಸುಪ್ರೀತ್‌ ಅವರಿಗೆ ಪಿಎಚ್ ಡಿ ಪದವಿ ಪ್ರದಾನ

1 Min Read

ಸುದ್ದಿಒನ್, ದಾವಣಗೆರೆ, ಅಕ್ಟೋಬರ್. 06 : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದ ನಿವಾಸಿ ಸುಪ್ರೀತ್ ಡಿ. ಇವರು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ (ಪಿಎಚ್. ಡಿ) ಪಡೆದಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೇಂಟ್ ಸ್ಟಡೀಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನೀತಾ ಆರ್ ಅವರ ಮಾರ್ಗದರ್ಶನದಲ್ಲಿ “Influence of E-Learning on Management Education with Special Reference to Karnataka State” ವಿಷಯ ಕುರಿತು ಸುಪ್ರೀತ್ ಡಿ. ಅವರು ಈ ಪ್ರಬಂಧವನ್ನು ಮಂಡಿಸಿದ್ದಾರೆ. ಈ ಮಹಾಪ್ರಬಂಧವನ್ನು ಮಾನ್ಯ ಮಾಡಿರುವ ದಾವಣಗೆರೆ ವಿಶ್ವವಿದ್ಯಾನಿಲಯವು ಸುಪ್ರೀತ್ ಡಿ. ಇವರಿಗೆ ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

ಪಿ.ಹೆಚ್.ಡಿ. ಪದವಿ ಪಡೆದ ಸುಪ್ರೀತ್ ಡಿ. MBA (HR), PGPM (HR) ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಶುಭ ಕೋರುವವರು :

ಶ್ರೀ ಭಾಗ್ಯಲಕ್ಷ್ಮಿ, ಇಂಡೆನ್ ಗ್ಯಾಸ್‌ ಏಜೆನ್ಸಿ ಹಾಗೂ ಶ್ರೀ ಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್, ಸಂತೇಬೆನ್ನೂರು.

ಶ್ರೀಮತಿ ಭಾಗ್ಯ ದಯಾನಂದ, ಶ್ರೀಮತಿ ನೇಹಾ ಸುಪ್ರೀತ್ ಮತ್ತು ಶ್ರೀಮತಿ ಕಾವ್ಯ ಸುಹಾಸ್,

ಶ್ರೀಮತಿ ರೂಪ ಸತೀಶ್, ಇವರ ಪ್ರೀತಿಯ ಮಗ ನಂದನ್, ನಂದನ್ ಆಪ್ಟಿಕಲ್ಸ್ ಚಿತ್ರದುರ್ಗ.

ಶ್ರೀಮತಿ ಆಶಾ ಮಂಜುನಾಥ್, ಇವರ ಪ್ರೀತಿಯ ಮಗ ಮುರಳಿ ಮೋಹನ್ ಕಾಸವರಟ್ಟಿ ಚಿತ್ರದುರ್ಗ.

ಪ್ರೀತಿಯ ಮಗಳು ಸ್ವರಾ ಮತ್ತು ಪ್ರೀತಿಯ ಮಗ ವೇದಾಂಶ್ ವಶಿಷ್ಠ ಹಾಗೂ ಸ್ನೇಹಿತರು ಸಂತೇಬೆನ್ನೂರು.

ಅಧ್ಯಕ್ಷರು ಮತ್ತು ಪ್ರಾಧ್ಯಾಪಕರ ವರ್ಗ, ಆಡಳಿತ ನಿರ್ವಹಣಾ ಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ, ದಾವಣಗೆರೆ.

 

Share This Article
Enable Notifications OK No thanks