Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೈಸೂರು ದಸರಾ ಜಂಬೂಸವಾರಿಯಲ್ಲಿ ದಾವಣಗೆರೆ ಸ್ಥಬ್ದಚಿತ್ರ ಪ್ರದರ್ಶನ

---Advertisement---

 

ದಾವಣಗೆರೆ, ಸೆಪ್ಟೆಂಬರ್ 30, : ಪ್ರತಿಯೊಂದು ಗ್ರಾಮೀಣ ಭಾಗದ ಎಲ್ಲಾ ಮನೆಗೆ ನಲ್ಲಿಯ ಮುಖಾಂತರ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲೆಯ ಸ್ಥಬ್ದಚಿತ್ರವು ಅಕ್ಟೋಬರ್ 2 ರಂದು ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಜಂಬುಸವಾರಿಯಲ್ಲ್ಲಿ ಪಾಲ್ಗೊಳ್ಳಲಿದೆ.
ದಾವಣಗೆರೆ ಜಿಲ್ಲೆಯ 100 ಗ್ರಾಮಗಳನ್ನು ಡಿಸೆಂಬರ್ 2025 ರ ಅಂತ್ಯಕ್ಕೆ 24/7 ಕುಡಿಯುವ ನೀರು ಗ್ರಾಮಗಳೆಂದು ಘೋಷಣೆ ಮಾಡಲು ಉದ್ದೇಶಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 51 ಗ್ರಾಮಗಳಲ್ಲಿ 24/7 ನಿರಂತರ ನೀರು ಸರಬರಾಜು ಗ್ರಾಮಗಳೆಂದು ಘೋಷಣೆ ಮಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸುಸ್ಥಿತಿ ಕಾಪಾಡುವಲ್ಲಿ ಹಾಗೂ ಯೋಜನೆಯ ಅನುಷ್ಟಾನದಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯಾನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದ್ದಾರೆ.

ಜಲ ಜೀವನ ಮಿಷನ್ ಯೋಜನೆಯು ಬ್ಯೂರೋ ಆಫ್ ಇಂಡಿಯಾ ಸ್ಟಾö್ಯಂಡರ್ಸ್ ಪ್ರಕಾರ ನೀರಿನ ಗುಣಮಟ್ಟವನ್ನು ಕಾಯ್ದಕೊಂಡು ಗ್ರಾಮೀಣ ಪ್ರದೇಶದ ಪ್ರತಿ ಮನೆ ಮನೆಗೂ ಸಮರ್ಪಕವಾಗಿ ಗುಣಮಟ್ಟದ ನೀರು ಸರಬರಾಜು ಮಾಡುವುದು, ಮಳೆಗಾಲದ ಮುಂಚೆ ಮತ್ತು ಮಳೆಗಾಲದ ನಂತರ ನೀರಿನ ಜಲ ಮೂಲಗಳು, ಕೊನೆ ಮನೆಯ ನಳಗಳ ಮಾದರಿಯನ್ನು ಸಂಗ್ರಹಿಸಿ ರಾಸಾಯನಿಕ ಮತ್ತು ಸೂಕ್ಷಾö್ಮಣು ಜೀವಿಗಳ ಪರೀಕ್ಷೆಯನ್ನು ಇಲಾಖೆಯ ಪ್ರಯೋಗಾಲಯದಲ್ಲಿ ಕೈಗೊಳ್ಳುವುದು, ಪ್ರತಿ ತಿಂಗಳು ಎಫ್‌ಟಿಕೆ ಮುಖಾಂತರ ನೀರಿನ ಗುಣಮಟ್ಟವನ್ನು ಪರೀಕ್ಷಿಸುವುದು, ನೀರು ಸರಬರಾಜು ಅಡಚಣೆ ಆಗದಂತೆ ಕ್ರಮವಹಿಸುವುದು, ಹೊಸ ಸಂಪರ್ಕವನ್ನು ಅರ್ಜಿ ಸಲ್ಲಿಸಿದ ಎರಡು ದಿನದಲ್ಲಿ ಕಲ್ಪಿಸುವುದು. ಸ್ವ-ಸಹಾಯ ಸಂಘ, ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರನ್ನೊಳಗೊಂಡು ಸಾರ್ವಜನಿಕರಿಗೆ ನೀರಿನ ಸದ್ಬಳಕೆ , ಕುಂದುಕೊರತೆ ಸಹಾಯವಾಣಿ ಮತ್ತು ಕಂದಾಯ ವಸೂಲಾತಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಇದು 24*7 ನೀರು ಪೂರೈಕೆಯಡಿ ಹೆಚ್ಚು ಗ್ರಾಮಗಳಲ್ಲಿ ಪೂರೈಸುತ್ತಿರುವ ಜಿಲ್ಲೆಗಳಲ್ಲಿ ದಾವಣಗೆರೆ ರಾಜ್ಯ ಮತ್ತು ದೇಶದಲ್ಲಿಯೇ ಮಾದರಿ ಜಿಲ್ಲೆಯಾಗಿದ್ದು ಮೈಸೂರು ದಸರಾ ಮಹೋತ್ಸವದಲ್ಲಿ ಪ್ರತಿ ಮನೆಗೂ ನಲ ನೀರು ಸ್ತಬ್ದಚಿತ್ರ ತಯಾರಿ ಮಾಡಿ ಗಮನ ಸೆಳೆಯುವ ಉದ್ದೇಶದಿಂದ ಮತ್ತು ದಸರಾ ಸ್ತಬ್ದಚಿತ್ರ ಆಯ್ಕೆ ಸಮಿತಿಯು ಇದೇ ವಿಷಯಕ್ಕೆ ಅನುಮೋದನೆ ನೀಡಿರುವುದರಿಂದ ಈ ಭಾರಿಯ ದಸರಾ ಮಹೋತ್ಸವದಲ್ಲಿ ಜಿಲ್ಲೆಯ ಸ್ತಬ್ದಚಿತ್ರವಾಗಿ ಪ್ರತಿ ಮನೆಗೂ ಗಂಗೆ ಪ್ರದರ್ಶನಗೊಳ್ಳಲಿದೆ.
ಜಿಲ್ಲೆಯಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಅದನ್ನು ಅರಿವು ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೀರು ಪೂರೈಕೆಯಲ್ಲಿ ನೀರು ಮಿತವಾಗಿ ಬಳಸಲು ಮತ್ತು ನೀರು ನಿರ್ವಹಣೆಗಾಗಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗಿದ್ದು ನೀರುಗಂಟಿಗಳಿಗೆ ಈ ಬಗ್ಗೆ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಜಲ ಅಮೂಲ್ಯವಾದ ಸಂಪತ್ತು, ಜೀವಜಲವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮನೆಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ ಮಿತ ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ತಿಳಿಸಿದ್ದಾರೆ.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ ಶಿವಲಿಂಗಪ್ಪ ಎನ್ ಕುಂಬಾರ್ ರವರು ಸ್ಥಬ್ದಚಿತ್ರದ ನೊಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು ಇವರು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು ಸ್ಥಬ್ದಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...