ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ : ಕೈ ನಾಯಕರಲ್ಲಿ ಟಿಕೆಟ್ ಯಾರಿಗೆ.. ರಾಮಲಿಂಗಾ ರೆಡ್ಡಿ ಏನಂದ್ರು..?

1 Min Read

 

ಬೆಂಗಳೂರು: ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 9ಕ್ಕೆ ದಿನಾಂಕವನ್ನ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಇದರ ನಡುವೆ ಟಿಕೆಟ್ ಫೈಟ್ ಕೂಡ ಜೋರಾಗಿದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.

ಈ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ಕ್ಷೇತ್ರಗಳಿಗೂ ಬೈ ಎಲೆಕ್ಷನ್ ಇದೆ. ಎರಡು ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ ಎಂಬ ನಂಬಿಕೆಯೂ ಇದೆ. ಪಂಚ ರಾಜ್ಯಗಳು ಏಪ್ರಿಲ್ ತಿಂಗಳಲ್ಲಿ ಚುನಾವಣೆ ಆಗುತ್ತೆ. ನಮಗೆ ತಮಿಳುನಾಡು, ಅಸ್ಸಾಂನಲ್ಲೂ ಹೆಚ್ಚು ಚಾನ್ಸೆಸ್ ಇದೆ. ಮೋದಿಯವರ ವಿರೋಧಿ ಅಲೆ ಈ ಸಲ ಎನ್ಡಿಎ ಕೂಟಕ್ಕೆ ಅನುಕೂಲವಾಗಲಿದೆ. ಮೋದಿಯವರು ಟ್ರಂಪ್ ಹೇಳಿದಂತೆ ಕೇಳ್ತಾರೆ. ಹೀಗಾಗಿ ನಮ್ಮ ದೇಶದ ಹಿತಾಸಕ್ತಿಯನ್ನ ಬಲಿ ಕೊಟ್ಟಿದ್ದಾರೆ. ಎಪ್ಸ್ಟೀನ್ ಫೈಲ್ ಸೇರಿದಂತೆ ಹಲವು ವಿಚಾರಗಳು ಹೊರ ಬಂದಿದೆ. ಮೋದಿಯವರ ನಾಯಕತ್ವದಲ್ಲಿ ಜನಕ್ಕೆ ವಿಶ್ವಾಸವಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆ ಎನ್ಡಿಎ ಕೂಟಕ್ಕೆ ಅನುಕೂಲವಾಗಲಿದೆ. ದಾವಣಗೆರೆ ಟಿಕೆಟ್ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.

ಇದೆ ವೇಳೆ ಸಿಎಂ ಔತಣಕೂಟದ ಬಗ್ಗೆ ಮಾತನ್ನಾಡಿ, ಇವತ್ತು ಸಂಜೆ ಇದೆ. ಹಿರಿಯರು ಅಂತಿದ್ದಾರಲ್ಲ ಆಗಾಗ ಕರೀತಾರೆ. ಈಗ ವಿಪಕ್ಷಗಳು ಏನೆಲ್ಲಾ ಕಾರ್ಯತಂತ್ರ ರೂಪಿಸ್ತಾರಲ್ಲ ಆ ಬಗ್ಗೆ ಎಲ್ಲಾ ನಾವೂ ಆಲೋಚನೆ ಮಾಡ್ಬೇಕು ಅಲ್ವಾ. ರಾಜಕಾರಣದ ಬಗ್ಗೆ, ಒಳಮೀಸಲಾತಿ ಬಗ್ಗೆ, ಇನ್ನೇನಾದ್ರೂ ವಿಚಾರಗಳಿದ್ರೆ ಸಹಜವಾಗಿಯೇ ಚರ್ಚೆಗಳಾಗುತ್ತವೆ ಎಂದಿದ್ದಾರೆ.

Share This Article