ದಾವಣಗೆರೆ (ಅ.29) : ತಾಲ್ಲೂಕಿನ 66 ಕೆ.ವಿ. ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್ 09 ಫೀಡರ್‍ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 31 ರಂದು ಬೆ.10 ರಿಂದ ಸ.4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ.
ಶನೇಶ್ವರ ಫೀಡರ್: ಜಿ.ಎಂ.ಐ.ಟಿ.ಕಾಲೇಜು, ದೇವರಾಜ ಅರಸ್ ಬಡಾವಣೆ, ಪೂಜಾ ಹೋಟಲ್, ಸಾಯಿ ಹೋಟಲ್, ಶಂಕರ ವಿಹಾರ ಬಡಾವಣೆ, ವಿನಾಯಕ ನಗರ, ಸಬ್‍ರಿಜಿಸ್ಟರ್ ಆಫೀಸ್, ಬಿ.ಎಸ್.ಎನ್.ಎಲ್ ಆಫೀಸ್, ಕೋರ್ಟ್ ಸುತ್ತಮುತ್ತ, ಗಿರಿಯಪ್ಪ ಲೇಔಟ್, ಪಿಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ದಾವಣಗೆರೆ ತಾಲ್ಲೂಕಿನ 220 ಕೆ.ವಿ.ಎಸ್.ಅರ್.ಎಸ್ ದಾವಣಗೆರೆಯಿಂದ ಹೊರಡುವ ಎಫ್ 13 ಇಂಡಸ್ಟ್ರಿಯಲ್ ಫೀಡರ್‍ನಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 30 ರಂದು ಬೆ.10 ರಿಂದ ಸ.4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ.
ಇಂಡಸ್ಟ್ರಿಯಲ್ ಫೀಡರ್: ಇಂಡಸ್ಟ್ರಿಯಲ್ ಏರಿಯ, ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯ ನಗರ, ಎಸ್.ಎ .ರವೀಂದ್ರನಾಥ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.