ದಾವಣಗೆರೆ ಸಮೀಪದ ನಿಲೋಗಲ್ ಗ್ರಾಮದ ಬಳಿ ಅಡಿಕೆ ತೋಟದ ತಂತಿಬೇಲಿಗೆ ಅಳವಡಿಸಿದ್ದ ಉರುಳಿಗೆ ಸಿಲುಕಿ 1 ವರ್ಷದ ಹೆಣ್ಣು ಚಿರತೆ ಮೃತಪಟ್ಟಿದೆ.ರೈತ ಜಿ. ರಂಗನಗೌಡ ಅವರ ತೋಟದಲ್ಲಿ ಅವಘಡ ನಡೆದಿದೆ. ಶನಿವಾರ ಬೆಳಿಗ್ಗೆ ರೈತರು ತೋಟಕ್ಕೆ ತೆರಳಿದಾಗ ಚಿರತೆ ಸಿಲುಕಿದ್ದು ಗೊತ್ತಾಗಿದೆ.
ಚಿರತೆ ರಕ್ಷಿಸುವ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ಫಲಕಾರಿಯಾಗಲಿಲ್ಲ.ಚಿರತೆ ಶುಕ್ರವಾರವೇ ಸಿಲುಕಿರಬಹುದು. ಉರುಳಿಗೆ ಮೂರು ಕಾಲು ಸಿಲುಕಿ ತೀವ್ರವಾಗಿ ಗಾಯಗೊಂಡಿತ್ತು ಎಂದು ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ರವೀಂದ್ರಕುಮಾರ್ ತಿಳಿಸಿದ್ದಾರೆ.ಚಿರತೆ ಸಾವಿನ ಕುರಿತು ತನಿಖೆ ನಡೆದಿದೆ. ತಂತಿಬೇಲಿಗೆ ಉರುಳು ಅಳವಡಿಸಿ ಕಾಡುಹಂದಿ ಮತ್ತಿತರ ಪ್ರಾಣಿ ಬೇಟೆಯಾಡುತ್ತಾರೆ. ಅಂತದೇ ಉರುಳಿಗೆ ಚಿರತೆ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ.




