ದಾವಣಗೆರೆ : ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. SPF ನಗರದಲ್ಲಿ ತನ್ನಿಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 4 ವರ್ಷದ ಸಿಂಧುಶ್ರೀ, 3 ವರ್ಷದ ಶ್ರೀಜಯ್ ನನ್ನು ಕೊಂದು 35 ವರ್ಷದ ತಂದೆ ಉದಯ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಸಾವಿನಿಂದ ನೋವಿನಲ್ಲಿದ್ದ ವ್ಯಕ್ತಿ ಇಂದು ಈ ರೀತಿ ಲೋಕವನ್ನೇ ತ್ಯಜಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಉದಯ್ ಅವರ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯ ಸಾವಿನಿಂದ ಉದಯ್ ಖಿನ್ನತೆಗೆ ಒಳಗಾಗಿದ್ದರು. ಅದೇ ನೋವಿನಿಂದ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾರೆ. ಪತ್ನಿಯನ್ನು ಎಷ್ಟು ಅಚ್ಚಿಕೊಂಡಿದ್ದರು ಎಂಬುದಕ್ಕೆ ಅವರು ಬರೆದ ಪತ್ರವೇ ಸಾಕ್ಷಿ. ಗೋಡೆಯ ಮೇಲೆ ರಕ್ತದಲ್ಲಿ ಐ ಲವ್ ಯೂ ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೇಮಾ ಹಾಸನ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೆರೆ ನಿವಾಸಿ. ಉದಯ್ ಹಾಗೂ ಹೇಮಾ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಇದ್ದರು. ಆದರೆ ಎಂಟು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಪತ್ನಿ ಹೇಮಾ ಸಾವನ್ನಪ್ಪಿದ್ದಳು. ಒಂದು ಕಡೆ ಪ್ರೀತಿಸಿದ ಹೆಂಡತಿ ಇಲ್ಲ, ಮತ್ತೊಂದು ಕಡೆ ಪುಟ್ಟ ಪುಟ್ಟ ಮಕ್ಕಳು. ಉದಯ್ ಗೆ ಬದುಕೇ ದೊಡ್ಡ ಚಿಂತೆಯಾಗಿದೆ. ಬದುಕುವುದಕ್ಕೂ ಆಗದೆ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ರೀತಿ ಹೆಂಡತಿಯಿಲ್ಲದ ನೋವು ಅಗಾಧವಾಗಿ ಕಾಡಿದರೆ ಅಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗಲು ಗಂಡನಾದವ ಯೋಚಿಸುವುದಿಲ್ಲ. ನಾನು ಇಲ್ಲವಾದರೆ ಮಕ್ಕಳ ಗತಿ ಏನು ಎಂಬ ಚಿಂತೆ ಕಾಡಿರುವ ಅನುಮಾನವಿದೆ. ಹೀಗಾಗಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.


