ದಾವಣಗೆರೆ ಚುನಾವಣೆ : ಈ ಬಾರಿ ನಮಗೆ ಟಿಕೆಟ್ ಕೊಡಿ : ಮುಸ್ಲಿಂ ಮುಖಂಡರಿಂದ ಒತ್ತಾಯ

1 Min Read

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಇದರ ನಡುವೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಶಾಮನೂರು ಕುಟುಂಬಕ್ಕೆ ಟಿಕೆಟ್ ಕೊಡಬೇಕು ಅಂತ ಒಂದಷ್ಟು ಮಂದಿ ಒಲವು ತೋರಿದರೆ, ಶಾಮನೂರು ಶಿವಶಂಕರಪ್ಪ ಅವರೇ ಹೇಳಿದ್ದರು, ಮುಂದಿನ ಬಾರಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸುತ್ತೇನೆ ಅಂತ. ಅದರಂತೆ ಈ ಬಾರಿ ನಮಗೆ ಟಿಕೆಟ್ ನೀಡಿ ಅಂತ ಮುಸ್ಲಿಂ ಮುಖಂಡರು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಸಚಿವ ಜಮೀರ್ ಅಹ್ಮದ್ ಅವರ ಬೆಂಬಲವೂ ಇದೆ.

ಆದರೆ ಇದರ ನಡುವೆ ಕೆಲ ಮುಸ್ಲಿಂ ಮುಖಂಡರು, ಸಮರ್ಥ್ ಶಾಮನೂರು ಅವರಿಗೇನೆ ಟಿಕೆಟ್ ನೀಡಿ ಅಂತಿದ್ದಾರೆ. ಈ ಸಂಬಂಧ ಈಗಾಗಲೇ ಸಿಎಂ ಹಾಗೂ ಡಿಸಿಎಂಗೆ ಒತ್ತಾಯ ಕೂಡ ಮಾಡಿದ್ದಾರೆ. ಈ ರೀತಿ ತಮ್ಮದೇ ಮುಖಂಡರು ಸಮರ್ಥ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿರೋದನ್ನ ಮುಸ್ಲಿಂ ಯುವಕರು ವಿರೋಧಿಸಿದ್ದು, ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರನ್ನು ಪ್ರಶ್ನೆ ಮಾಡು, ಘೇರಾವ್ ಹಾಕಲು ಯುವಕರ ಗುಂಪು ಮುಂದಾಗಿದೆ.

ಈಗಾಗಲೇ ಚುನಾವಣಾ ಆಯೋಗದಿಂದ ಉಪಚುನಾವಣೆಯ ದಿನಾಂಕ ಹಾಗೂ ಮತ ಏಣಿಕೆಯ ದಿನಾಂಕವನ್ನು ಘೊಇಷಣೆ ಮಾಡಲಾಗಿದೆ. ಏಪ್ರಿಲ್ 9ರಂದು ಈ ಸಂಬಂಧ ಚುನಾವಣೆ ನಡೆದರೆ, ಮೇ 4 ರಂದು ಮತ ಎಣಿಕೆಯೂ ನಡೆಯಲಿದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಾಕಷ್ಟು ಡಿಮ್ಯಾಂಡ್ ಇದ್ದು, ಕಾಂಗ್ರೆಸ್ ಹೈಕಮಾಂಡ್ ಅಲ್ಲಸಂಖ್ಯಾತರಿಗೆ ನೀಡುತ್ತಾ ಅಥವಾ ಮತ್ತೆ ಕುಟುಂಬದವರಿಗೆ ಕೊಡುತ್ತಾ ಎಂಬುದನ್ನ ನೋಡಬೇಕಿದೆ.

Share This Article