ದಾವಣಗೆರೆ ಉಪಚುನಾವಣೆ : ಎಸ್ ಎಸ್ ಮಲ್ಲಿಕಾರ್ಜುನ್ v/s ಜಮೀರ್ ಅಹ್ಮದ್..!

1 Min Read

ದಾವಣಗೆರೆ: ಶಾಮನೂರು ಶಿವಶಂಕರಪ್ಪನವರು ನಿಧನರಾದ ನಂತರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್ಲಾ ತಯಾರಿ ನಡೀತಾ ಇದೆ. ಆದರೆ ಟಿಕೆಟ್ ಗಾಗಿ ಇಬ್ಬರು ಸಚಿವರ ನಡುವೆ ಪೈಪೋಟಿ ಆರಂಭವಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ಜಮೀರ್ ಅಹ್ಮದ್ ಖಾನ್ ನಡುವೆ ದೊಡ್ಡ ಪೈಪೋಟಿ ಎದುರಾಗಿದೆ.

ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯುವುದಕ್ಕೆ ಕಸರತ್ತನ್ನ ನಡೆಸ್ತಾ ಇದ್ದಾರೆ. ಮಲ್ಲಿಕಾರ್ಜುನ್ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಪಡ್ತಾ ಇದ್ದರೆ, ಅಲ್ಪಸಂಖ್ಯಾತ ಮತಗಳು ಹೆಚ್ಚಾಗಿರುವ ಕಾರಣ ಜಮೀರ್ ಅಹ್ಮದ್ ತಮ್ಮ ಸಮುದಾಯಕ್ಕೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಈ ಸಂಬಂಧ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಪ್ರತಿಕ್ರಿಯೆ ನೀಡಿದ್ದಾರೆ.

ಶಾಮನೂರು ಶಿವಶಂಕರಪ್ಪಾಜಿ ಅವರು ಆಶೀರ್ವಾದ ಮಾಡಿದ್ದರು. ನಾನಿರುವವರೆಗೂ ಇದ್ದು ಆ ಬಳಿಕ ಮುಸ್ಲಿಂ ಸಮುದಾಯಕ್ಕೆ ಕೊಡಬೇಕು ಎಂಬುದನ್ನ ಹೇಳಿದ್ದಾರೆ ಎಂಬ ವಿಚಾರವನ್ನ ಮಾಧ್ಯಮದಲ್ಲಿ ನೋಡಿದೆ. ಆದರೆ ಈಗಿನ ಕಾಲದಲ್ಲಿ ನುಡಿದಂತೆ ನಡೆದುಕೊಳ್ಳುವವರು ಯಾರಿದ್ದಾರೆ..? ಗ್ರಾಮ ಪಂಚಾಯತಿ ಮೆಂಬರೇ ನಿಲ್ಲಲ್ಲ, ಕುರ್ಚಿಗೋಸ್ಕರ. ಹಾಗಾಗಿ ಆ ಮಾತು ಈಗ ಅಪ್ರಸ್ತುತ ಎನಿಸುತ್ತದೆ. ನಾನು ಕೂಡ ಬಹಳಷ್ಟು ಪರಿಶೀಲನೆ ಮಾಡಿದ್ದೀನಿ, ಆ ಕುಟುಂಬದವರ ಬಗ್ಗೆ ಹೇಳಿಕೆಯನ್ನು ಕೊಟ್ಟಿದ್ದೀನಿ. ಈಗಾಗಲೇ ಅವರ ಮನೆಯಲ್ಲಿ ಮಂತ್ರಿ, ಸಂಸದ, ಶಾಸಕರು ಇದ್ದ ಕಾರಣದಿಂದ ಒಬ್ಬರು ಅಲ್ಪಸಂಖ್ಯಾತರಿಗೆ ಕೊಡುವುದು ಉತ್ತಮ. ಯಾಕಂದ್ರೆ ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತರಿಗೆ ಕೊಟ್ಟು ಗೆದ್ದು ಬಂದಿದ್ದೀವಿ. ಅಲ್ಪಸಂಖ್ಯಾತರಿಗೆ ನೀಡಿದರೆ ನಾವೂ ಬೆಂಬಲವನ್ನು ಕೊಡ್ತೀವಿ, ಹಣಕಾಸಿನ ನೆರವನ್ನು ನೀಡ್ತೀವಿ ಎಂದಿದ್ದಾರೆ.

Share This Article
Enable Notifications OK No thanks