ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿಯದ್ದು ಸೇನೆ ಸೇರುವ ಬಯಕೆ..!

ನವದೆಹಲಿ: ಇತ್ತೀಚೆಗೆ ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ದುರಂತ ಸಂಭವಿಸಿ, ಮಡಿದ 13 ಸೇನಾ ಸಿಬ್ಬಂದಿಯಲ್ಲಿ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಕೂಡ ಒಬ್ಬರು. ಇದೀಗ ಅವರ ಪುತ್ರಿ ಕೂಡ ಸೇನೆ ಸೇರುವ ಬಯಕೆ ವ್ಯಕ್ತಪಡಿಸಿದ್ದಾರೆ.

ಚೌಹಾಣ್ ಪುತ್ರಿಗೆ ಇನ್ನು 11 ವರ್ಷ. 7ನೇ ತರಗತಿ ಓದುತ್ತಿರುವ ಆರಾಧ್ಯಗೆ ತನ್ನ ತಂದೆಯಂತೆಯೇ ಪೈಲೆಟ್ ಆಗುವ ಆಸೆಯಾಗಿದೆ. ಹುತಾತ್ಮರಾದ ತಂದೆಗೆ ಸಹೋದರ ಅವಿರಾಜ್ ಜೊತೆ ನಮನ ಸಲ್ಲಿಸಿದ ಬಳಿಕ ಈ ಆಸೆ ವ್ಯಕ್ತಪಡಿಸಿದ್ದಾರೆ.

ತಂದೆಯ ಮಾತನ್ನ ನೆನೆಪಿಸಿಕೊಂಡಿದ್ದಾರೆ. ತಂದೆ ಹೇಳ್ತಾ ಇದ್ರು ಅಂಕಗಳಿಗಾಗಿ ಓದಬೇಡ. ಅಧ್ಯಯನದ ಕಡೆ ಹೆಚ್ವು ಗಮನ ಹರಿಸು. ಅಂಕ ತಾನಾಗಿಯೇ ಬರುತ್ತೆ ಎನ್ನುತ್ತಿದ್ದರು ಎಂದು ತಮ್ಮ ತಂದೆ ಕೊಡುತ್ತಿದ್ದ ಸಲಹೆಯನ್ನ ಆರಾಧ್ಯ ನೆನೆದಿದ್ದಾರೆ. ಇನ್ನು ಪೃಥ್ವಿ ಸಿಮನಗ್ ಚೌಹಾಣ್ 2000 ಇಸವಿಯಲ್ಲಿ ವಾಯುಪಡೆಗೆ ಸೇರಿದ್ದರು.

Share This Article
Leave a Comment

Leave a Reply

Your email address will not be published. Required fields are marked *