ಬಿಜೆಪಿಯ ‘ಜನ ಸ್ವರಾಜ್’ ಯಾತ್ರೆಗೆ ಡೇಟ್ ಫಿಕ್ಸ್..!

1 Min Read

 

ಬೆಂಗಳೂರು: ಬಿಜೆಪಿಯಲ್ಲಿ ಈಗ ರಾಜ್ಯ ಪ್ರವಾಸ ಶುರುವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ 4 ತಂಡಗಳನ್ನ ರಚಿಸಿದ್ದು, ಎಲ್ಲೆಡೆ ರಾಜ್ಯ ಪ್ರವಾಸ ಮಾಡಲಿದ್ದಾರೆ. ಜಿಲ್ಲೆಗಳಿಗೆ ತೆರಳಿ ಸಮಸ್ಯೆ ಆಲಿಸಲಿದ್ದಾರೆ. ಜನ ಸ್ವರಾಜ್ ಯಾತ್ರೆ ಇದೇ ತಿಂಗಳ 19 ರಿಂದ ಶುರುವಾಗಲಿದೆ.

ಈ ನಾಲ್ಕು ತಂಡಗಳಲ್ಲಿ 6 ನಾಯಕರು ಇರಲಿದ್ದಾರೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಈಶ್ವರಪ್ಪ ಇರಲಿದ್ದಾರೆ. ಒಂದೊಂದು ಕಡೆ ಒಬ್ಬೊಬ್ಬರ ಟೀಂ ಹೊರಡಲಿದೆ. ನ.19ರಿಂದ 22ರವರೆಗೆ ಈ ಪ್ರವಾಸ ಮುಂದುವರೆಯಲಿದೆ.

ಯಡಿಯೂರಪ್ಪ ನೇತೃತ್ವದಲ್ಲಿ ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿಯಲ್ಲಿ ಪ್ರವಾಸ ನಡೆದ್ರೆ,

ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್​ ಗೆ ನಳೀನ್ ಕುಮಾರ್ ಕಟೀಲ್ ಆಂಡ್ ಟೀಂ ಹೊರಡಲಿದೆ.

ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ಪ್ರವಾಸಕ್ಕೆ ಎಸ್ ಈಶ್ವರಪ್ಪ ಆಂಡ್ ಟೀಂ ನಿಂದ ಶುರುವಾಗುತ್ತೆ.

ಜಗದೀಶ್​ ಶೆಟ್ಟರ್​ ತಂಡ ದಾವಣಗೆರೆ, ಚಿತ್ರದುರ್ಗ, ತುಮಕೂರು , ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *