ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಆದ್ರೆ ಪ್ರತಿದಿನ ಬದುಕೋದಕ್ಕೆ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹಾಸಿಗೆ, ದಿಂಬು ಇಲ್ಲದೆ ಒದ್ದಾಡುತ್ತಿದ್ದಾರೆ. ಹಾಸಿಗೆ, ದಿಂಬಿಗಾಗಿ ಅದೆಷ್ಟು ಬಾರಿ ಕೋರ್ಟ್ ಗೆ ಮನವಿ ಮಾಡಿದ್ರೋ ಏನೋ. ಆದರೂ ಸಿಗುತ್ತಿಲ್ಲ. ವಾಕ್ ಮಾಡೋದಕ್ಕೆ ಕೋರ್ಟ್ ಅನುಮತಿ ಸಿಕ್ಕಿತ್ತು. ಆದ್ರೆ ಈಗ ಅದಕ್ಕೂ ಬ್ರೇಕ್ ಬೀಳುತ್ತಿದೆ. ಪರಪ್ಪನ ಅಗ್ರಹಾರಕ್ಕೆ ಹೊಸ ಅಧಿಕಾರಿಯ ನೇಮಕದಿಂದ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಪರಪ್ಪನ ಅಗ್ರಹಾರ ಜೈಲು ಜೈಲಿನಂತೆ ಇಲ್ಲ. ಅಲ್ಲಿ ಮರ್ಡರ್ ಮಾಡಿದವನಿಗೆ, ಉಗ್ರನಿಗೂ ರಾಜಾತಿಥ್ಯ ನೀಡುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳು ವೈರಲ್ ಆಗಿತ್ತು. ಇದೆಲ್ಲವನ್ನು ಕಂಟ್ರೋಲ್ ಮಾಡುವುದಕ್ಕೆ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ನೇಮಕವಾದ ಮೇಲೆ ಕಟ್ಟುನಿಟ್ಟಿನ ನೀತಿಯನ್ನ ಜಾರಿಗೆ ತರಲಾಗಿದೆ.
ಅಂಶು ಕುಮಾರ್ ನೇಮಕದಿಂದ ಪ್ರತಿದಿನ ಜೈಲನ್ನು ಮಾನಿಟರಿಂಗ್ ಮಾಡಲಾಗುತ್ತದೆ. ಸಿಬ್ಬಂದಿಗಳಿಂದ ಪ್ರತಿದಿನ ಜೈಲಿನಲ್ಲಿ ತಪಾಸಣೆ ನಡೆಯುತ್ತದೆ. ಇನ್ನು ದರ್ಶನ್ ವಿಚಾರಕ್ಕೆ ಬರೋದಾದ್ರೆ ಅವರಿಗೆ ವಾಕ್ ಮಾಡುವುದಕ್ಕೆ ಅಂತನಾದ್ರು ಕೋರ್ಟ್ ಅನುಮತಿ ನೀಡಿತ್ತು. ಅಲ್ಪಸ್ವಲ್ಪ ವಾಕ್ ಮಾಡಿಕೊಂಸು ಇದ್ದ ದರ್ಶನ್ ಗೆ, ಈಗ ವಾಕ್ ಮಾಡುವುದಕ್ಕೂ ಅನುಮತಿ ಇಲ್ಲ. ಜೊತೆಗೆ ಜೈಲಿನ ಸಿಬ್ಬಂದಿಗಳು ಊಟವನ್ನ ಕೋಣೆಗೆ ತಂದುಕೊಡುತ್ತಿದ್ದರು. ಈಗ ಅದಕ್ಕೂ ಅನುಮತಿ ಇಲ್ಲ. ದರ್ಶನ್ ಅವರೇ ಊಟ, ತಿಂಡಿಗೆ ಹೋಗಬೇಕು. ಈ ಮೊದಲಾದ್ರೆ ಬಟ್ಟೆ ಒಣಗಿ ಹಾಕುವುದಕ್ಕೆ ಮಾತ್ರ ಹೊರಗೆ ಹೋಗ್ತಾ ಇದ್ರು. ಅಂಶು ಕುಮಾರ್ ಅವರು ಕಂಪ್ಲೀಟ್ ಹ್ಯಾಂಡವರ್ ತೆಗೆದುಕೊಂಡ ಮೇಲೆ ದರ್ಶನ್ ಅವರಿಗೂ ಸಂಕಷ್ಟ ಎದಯರಾಗಿದೆ. ಇದರ ನಡುವೆ ದರ್ಶನ್ ಅಭಿಮಾನಿಗಳೇ ಡೆವಿಲ್ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

