ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ನೂರು ದಿನಗಳಿಂದ ಜೈಲುವಾಸದಲ್ಲಿದ್ದು ಬೇಸತ್ತು ಹೋಗಿದ್ದಾರೆ. ಯಾವಾಗ ಹೊರಗೆ ಬರ್ತೀನಿ ಅಂತ ಕಾಯುತ್ತಿದ್ದಾರೆ. ಎ2 ಆರೋಪಿಯಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ನೋಡಲು ಅವರ ಮನೆಯವರು ಆಗಾಗ ಬಳ್ಳಾರಿಗೆ ಹೋಗುತ್ತಿದ್ದಾರೆ. ಇಂದು ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
57ನೇ ಸಿಸಿಹೆಚ್ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ಇಂದು ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಆದರೆ ಕೋರ್ಟ್ ವಾದ ಪ್ರತಿವಾದದ ಬಳಿಕ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 23 ಅಂದ್ರೆ ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ. ಈಗ ಸೋಮವಾರ ಏನಾಗಬಹುದು ಎಂಬದರತ್ತ ಎಲ್ಲರ ಚಿತ್ತ ನೆಟ್ಟಿದೆ.
ಕೋರ್ಟ್ ನಲ್ಲಿ ಇಂದು ಆರೋಪಿ ಪರವಾಗಿ ರಂಗನಾಥ ರೆಡ್ಡಿ ವಾದ ಮಂಡಿಸಿದರು. ಒಂದು ವೇಳೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸೆಕ್ಷನ್ 436 ಅಡಿ ಅರ್ಜಿ ಪರಿಗಣಿಸದಿದ್ದರೆ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು. ಹೀಗಾಗಿ ಸಿಆರ್ಪಿಸಿ 439ಸೆಷನ್ಸ್ ಕೋರ್ಟ್ ಪರಿಗಣಿಸಬೇಕು. ಆರೋಪಿಗಳ ವಿರುದ್ಧ ನಾನ್ ಬೇಲಬಲ್ ಸೆಕ್ಷನ್ ಅಡಿ ಆರೋವಿದೆ. ನಿರೀಕ್ಷಣಾ ಜಾಮೀನು ವಿಚಾರದಲ್ಲಿ ಮಾತ್ರ ಸೆ.436 ಅಡಿ ಅಪ್ಲೆ ಆಗುತ್ತದೆ. ಆಗ ಮಾತ್ರ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಬಹುದು. ಆದ್ರೆ ಸೆ.439 ಅಡಿ ರೆಗ್ಯುಲರ್ ಬೇಲ್ ಅನ್ನು ಸೆಷನ್ಸ್ ನೀಡಬಹುದು. ಹೀಗಾಗಿ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿ ಆದೇಶಿಸಬೇಕು ಎಂದು ವಕೀಲ ರಂಗನಾಥ್ ರೆಡ್ಡಿ ಅವರು ಕೋರ್ಟ್ ಗೆ ಮನವಿ ಮಾಡಿದರು.