ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 05 : ಪೃಥ್ವಿರಾಜ್ ಎಂಬಾತನ ಹುಚ್ಚಾಟವನ್ನು ಆಲ್ಮೋಸ್ಟ್ ಎರಡ್ಮೂರು ಸಲ ಎಲ್ಲರೂ ಕೇಳಿರುತ್ತಾರೆ. ಈ ಮೊದಲೇ ನಾನು ಟೆರರಿಸ್ಟ್ ಆಗುತ್ತೇನೆ ಎಂದಿದ್ದ. ಆಮೇಲೆ ನನ್ನನ್ನು ಬಂಧಿಸಿದರೆ ದರ್ಶನ್ ಇರುವ ಸೆಲ್ ಪಕ್ಕಕ್ಕೆ ಹಾಕಬೇಕು ಎಂದು ಬೇಡಿಕೆ ಕಟ್ಟಿದ್ದ. ಅಷ್ಟೇ ಯಾಕೆ ಒಮ್ಮೆ ಬೆಂಗಳೂರಿನ ವಿಧಾನಸೌಧದ ಮುಂದೆ ತನ್ನ ಬೈಕಿಗೆ ತಾನೇ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದ. ಇದೆಲ್ಲಾ ಘಟನೆಗಳಾದ ಮೇಲೆ ಸಂಬಂಧಪಟ್ಟವರು ಆತನನ್ನು ಗಂಭೀರವಾಗಿ ಪರಿಗಣಿಸದರೋ ಇಲ್ಲವೋ ಗೊತ್ತಿಲ್ಲ. ಈಗ ಆತನ ಹುಚ್ಚಾಟ ಮಿತಿ ಮೀರಿದೆ. ತಹಶಿಲ್ದಾರರ ಕಾರಿಗೇನೆ ಬೆಂಕಿ ಹಚ್ಚಿದ್ದಾನೆ.
ತಾಲೂಕು ದಂಡಾಧಿಕಾರಿಗಳ ವಾಹನಕ್ಕೆ ಪೃಥ್ವಿರಾಜ್ ಬೆಂಕಿ ಹಚ್ಚಿ ಹುಚ್ಚಾಟ ಮೆರೆದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ. ಇದನ್ನು ಕಂಡು ಅಲ್ಲಿನ ಜನ ಭಯಭೀತಿಗೊಂಡಿದ್ದಾರೆ. ತಹಶೀಲ್ದಾರ್ ಅವರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ, ಕಚೇರಿ ಮುಂದೆ ಕಾರು ನಿಲ್ಲಿಸಿದ್ದರು. ತಹಸಿಲ್ದಾರ್ ಅವರು ಒಳಗಡೆ ಹೋದ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಪೃಥ್ವಿರಾಜ್ ಸರ್ಕಾರಿ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಹು ದೊಡ್ಡ ಅನಾಹುತ ತಪ್ಪಿದೆ. ಬೆಂಕಿ ತಗುಲಿದ ತಹಶೀಲ್ದಾರ್ ವಾಹನದ ಮುಂಭಾಗ ಸ್ವಲ್ಪ ಕಪ್ಪು ಆಗಿದೆ. ಸ್ಥಳಕ್ಕೆ ಆಗಮಿಸಿದ ಚಳ್ಳಕೆರೆ ಪೊಲೀಸರು ಪೃಥ್ವಿರಾಜ್ ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಪೃಥ್ವಿರಾಜ್ ಇದೇ ಮೊದಲ ಬಾರಿಗೆ ಈ ರೀತಿ ಆಡಿದ್ದರೆ ಯೋಚನೆ ಮಾಡಬಹುದಿತ್ತು. ಆದರೆ ನಾನು ಟೆರರಿಸ್ಟ್ ಆಗುತ್ತೇನೆಂದು ಸ್ಟೇಟ್ಮೆಂಟ್ ಕೊಟ್ಟು, ಸಿಕ್ಕಸಿಕ್ಕಲ್ಲಿ ಬೆಂಕಿ ಹಚ್ಚಿಕೊಂಡು ಓಡಾಡುತ್ತಿದ್ದರೆ ಹೇಗೆ..? ಸಂಬಂಧಪಟ್ಟವರಾದರೂ ಆತನ ಮನಸ್ಥಿತಿ, ಆರೋಗ್ಯ ಸ್ಥಿತಿಯನ್ನ ಅರಿಯಬೇಕಲ್ಲವೆ.