ಬೆಂಗಳೂರು: ಕನ್ನಡ ಇಂಡಸ್ಟ್ರಿಯಲ್ಲಿ ದರ್ಶನ್ ಹಾಗೂ ಸುದೀಪ್ ಕುಚಿಕು ಗೆಳೆಯರಾಗಿದ್ದವರು. ತಮ್ಮ ಸ್ನೇಹದಿಂದ ಇತಿಹಾಸ ಸೃಷ್ಟಿ ಮಾಡಬೇಕಿದ್ದವರು. ಆದರೆ ಇಬ್ಬರ ನಡುವಿನ ಅಂತರ ಸ್ಟಾರ್ ವಾರ್, ಫ್ಯಾನ್ ಅಂತ ನಡೆಯುತ್ತಲೇ ಇರುತ್ತದೆ. ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲೆಲ್ಲಾ ತಿರುಗೇಟು ಕೊಡುವ ಪೋಸ್ಟರ್ ಗಳೇ ಓಡಾಡುತ್ತಿವೆ. ಇದರ ನಡುವೆ ಈ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತಾ, ಪ್ರೇಮ್, ಧ್ರುವ ಪ್ರತಿಕ್ರಿಯೆ ನೀಡಿದ್ದಾರೆ. ತಾವೂ ಕಂಡಂತ ದರ್ಶನ್ ಹಾಗೂ ಸುದೀಪ್ ಹೇಗೆ ಎಂಬುದನ್ನ ತಿಳಿಸಿದ್ದಾರೆ.
ನನ್ನ ಮುಂದೆ ಸುದೀಪ್ ಅವರು ದರ್ಶನ್ ಬಗ್ಗೆಯಾಗಲಿ, ದರ್ಶನ್ ಕುಟುಂಬದ ಬಗ್ಗೆಯಾಗಲಿ ಮಾತನಾಡಿಲ್ಲ. ಮಧ್ಯದಲ್ಲಿ ಯಾರೋ ಕಿತಾಪತಿ ಮಾಡುತ್ತಾರೆ. ದಕ್ಕೆ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಕಿವಿಗೊಡಬಾರದು. ಸುದೀಪ್ ಅವರು ಒಂದು ಒಳ್ಳೆಯ ಮಾತು ಹೇಳಿದ್ದಾರೆ. ಸಿನಿಮಾ ಚೆನ್ನಾಗಿ ಇದ್ದರೆ ಮಾತ್ರ ಫ್ಯಾನ್ಸ್ ಬರುತ್ತಾರೆ. ಸಿನಿನಾ ಚೆನ್ನಾಗಿಲ್ಲ ಅಂದ್ರೆ ಯಾರೂ ಬರಲ್ಲ ಅಂತ ಹೇಳಿದ್ದಾರೆ. ಇಲ್ಲಿ ಹೀರೋ, ಹೀರೋಗಿರಿಗಿಂತ ಸಿನಿಮಾ ದೊಡ್ಡದು. ಸುದೀಪ್ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಅವರ ವೈಯಕ್ತಿಕ ಕಾರಣ ಇರಬಹುದು. ಆದರೆ ಯಾವತ್ತೂ ಕೂಡ ಅವರು ಪರಸ್ಪರ ಬೈದುಕೊಂಡಿಲ್ಲ, ಕೆಟ್ಟದಾಗಿ ಮಾತನಾಡಿಲ್ಲ ಎಂದಿದ್ದಾರೆ.
ಇದೇ ವಿಚಾರಕ್ಕೆ ಧ್ರುವ ಸರ್ಜಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಕೆಡಿ ಸಿನಿಮಾವನ್ನು ಪೈರಸಿ ಮಾಡುವ ಆತಂಕ ಆ ಟೀಂ ಅನ್ನು ಕಾಡುತ್ತಿದೆ. ಇನ್ನು ದರ್ಶನ್ ಹಾಗೂ ವಿಜಯಲಕ್ಷ್ಮೀಗೆ ಆತ್ಮೀಯವಾಗಿರುವ ರಕ್ಷಿತಾ ಪ್ರತಿಕ್ರಿಯೆ ನೀಡಿದ್ದು, ಸುದೀಪ್ ಅವರಿಗೆ ವಿಜಯಲಕ್ಷ್ಮೀ ಆ ಮಾತನ್ನ ಹೇಳಿಲ್ಲ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














