ದರ್ಶನ್ ಹೇಳಿಕೊಟ್ಟ ಕುದುರೆ ಸವಾರಿ ನೆನೆದ ಕಿಚ್ಚ ಸುದೀಪ್

1 Min Read

ಬೆಂಗಳೂರು: ನಾಳೆ ಅಂದ್ರೆ ಸೆಪ್ಟೆಂಬರ್ 2ಕ್ಕೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಇಂದು ಕಿಚ್ಚ ಸುದೀಪ್ ಒಂದು ಸುದ್ದಿಗೋಷ್ಟಿಯನ್ನ ಕರೆದಿದ್ದರು. ಈ ಸುದ್ದಿಗೋಷ್ಟಿಯ ವಿಶೇಷತೆಯೇ ತಮ್ಮ ಮುಂದಿನ ಸಿನಿಮಾ ಹಾಗೂ ಹುಟ್ಟುಹಬ್ಬದ ಬಗ್ಗೆ ಮಾತನಾಡುವುದಾಗಿತ್ತು. ಈ ವೇಳೆ ಸುದೀಪ್ ಅವರು ದರ್ಶನ್ ಅವರ ಜೊತೆಗಿನ ಒಡನಾಟವನ್ನು ನೆನೆದಿದ್ದಾರೆ.

ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಎಂಥ ದೋಸ್ತಿಗಳಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮತ್ತೆ ಅವರು ಒಂದಾಗಲಿ ಎಂದೇ ಎಲ್ಲರು ಬಯಸುತ್ತಿದ್ದಾರೆ. ಆದರೆ ಆ ಕನಸು ನನಸಾಗುವುದೇ ಅನುಮಾನವಿರಬೇಕು. ಆದರೂ ಅಭಿಮಾನಿಗಳು ಸದಾ ದೇವರಲ್ಲಿ ಬೇಡಿಕೊಳ್ತಾ ಇರ್ತಾರೆ. ಅದರ ನಡುವೆಯೇ ಸುದೀಪ್ ಅವರು ದರ್ಶನ್ ಅವರು ಕಲಿಸಿದ ಕುದುರೆ ಸವಾರಿ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ನನಗೆ ಕುದುರೆ ಹತ್ತೋದನ್ನ ಹೇಳಿಕೊಟ್ಟರು. ಕುದುರೆ ಓಡಿಸುವುದು ಕಷ್ಟ. ಒಂದು ಸಲ ಬಿದ್ದಿದ್ದೆ. ಅದಕ್ಕಾಗಿ ನಾನು ಪೌರಾಣಿಕ ಪಾತ್ರ ಮಾಡಲ್ಲ. ನನಗೆ ಕುದುರೆ ಓಡಿಸೋದು ಆಗಲ್ಲ. ಯಾವುದೋ ಒಂದು ಪಾತ್ರ ಸಿಕ್ಕಿತ್ತು. ಆಗ ಪ್ರಾಕ್ಟೀಸ್ ಮಾಡುವಾಗ ಅನುಭವ ಆಯ್ತು. ಆಗ ಹೇಳಿದ್ರು, ಹೀರೋ ಅಂದ್ರೆ ಫೈಟ್ ಮಾಡೋದು ಕಲಿಯಬೇಕು. ಕುದುರೆ ಓಡಿಸುವುದನ್ನು ಕಲಿಯಬೇಕು ಅಂತ ಏನೇನೋ ಹೇಳಿದ್ದರು. ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ದೆ. ಕಲಿತೆ ಕೂಎ. ಒಂದು ವಾರ ಪ್ರಾಕ್ಟೀಸ್ ಮಾಡಿದ್ದೆ. ಹತ್ತು ದಿನ ಚೆನ್ನಾಗಿ ಓಡಿಸಿದೆ. ಒಂದು ಸುಮ್ಮನೆ ನಿಂತಿದ್ದ ಕುದುರೆ ಯಾಕೆ ಎಗರಿತು ಅಂತ ಗೊತ್ತಿಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks