ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮೊದಲ ಬಾರಿಗೆ ಜೈಲಿಗೆ ಹೋದಾಗ ಆರೋಗ್ಯ ಸಮಸ್ಯೆಯನ್ನ ಹೇಳಿ ಜಾಮೀನು ಪಡೆದಿದ್ದರು. ಈಗ ಸಾಕ್ಷಿಗಳ ಟ್ರಯಲ್ ನಡೆಯುತ್ತಿರುವ ಕಾರಣ ಜಾಮೀನು ಸಿಗುವುದಕ್ಕೂ ಸಾಧ್ಯವಿಲ್ಲ. ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದರೂ ಅದು ರಿಜೆಕ್ಟ್ ಆಗುವ ಎಲ್ಲಾ ಸಾಧ್ಯತೆಗಳು ಇದೆ. ಹೀಗಾಗಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಆದರೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿಯೊಂದನ್ನ ಮಾಡಿದ್ದಾರೆ.
ಆದಷ್ಟು ಬೇಗ ಟ್ರಯಲ್ ಮುಗಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಟ್ರಯಲ್ ಬೇಗನೇ ನಡೆಸುವುದಕ್ಕೆ ಅವಕಾಶವಿದೆಯಾ..? ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಏನು ಹೇಳುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಸಾಕ್ಷಿಗಳು ಕಡಿಮೆ ಏನು ಇಲ್ಲ. ಹೆಚ್ಚಾಗಿರುವ ಕಾರಣ ಸಾಕ್ಷಿಗಳ ವಿಚಾರಗೇನೆ ಸುಮಾರು ಒಂದು ವರ್ಷಗಳ ಕಾಲ ಬೇಕಾಗುತ್ತದೆ.
ಟ್ರಯಲ್ ಮುಗಿದರೆ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಬಹುದು. ಜಾಮೀನು ಸಿಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿಯೇ ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಅದರಲ್ಲೂ ಡೇ ಟು ಡೇ ಬೇಸಿಸ್ ನಲ್ಲಿ ವಿಚಾರಣೆ ನಡೆಸುವುದಕ್ಕೆ ಮನವಿ ಮಾಡಿದ್ದಾರೆ. ಇಲ್ಲಿ ದರ್ಶನ್ ಪರ ವಕೀಲರ ಅರ್ಜಿಗೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ತ್ವರಿತಗತಿಯಲ್ಲಿ ವಿಚಾರಣೆ ನಡೆಸುವುದಕ್ಕೆ ಪೊಲೀಸರು ಕೂಡ ಆಕ್ಷೇಪ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಚಾರಣೆ ಮುಗಿದರೆ ಸಾಕು ಎಂಬಂತಾಗಿದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ. ಪವಿತ್ರಾ ಗೌಡ ಕೂಡ ಇತ್ತೀಚೆಗೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಮಗಳಿಗೆ ಪರೀಕ್ಷೆ ಇದೆ ಅಂತ. ಆದರೆ ಜಾಮೀನು ಅರ್ಜಿ ವಜಾಗೊಂಡಿತ್ತು.



