ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ ಸಂಬಂಧ ಈಗಾಗಲೇ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕೇಸ್ ಕೋರ್ಟ್ ನಲ್ಲಿದ್ದು, ಹದಿನೇಳು ಆರೋಪಿಗಳು ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಅದರಲ್ಲೂ ಈ ಕೇಸಲ್ಲಿ ಜೈಲು ಪಾಲಾದ ಮೇಲೆ ಪವಿತ್ರಾ ಹಾಗೂ ದರ್ಶನ್ ಭೇಟಿಯಾಗಿರಲಿಲ್ಲ. ಅದರಲ್ಲೂ ಬಳ್ಳಾರಿ ಜೈಲಿಗೆ ಹೋದ ಮೇಲಂತು ಸಂಪರ್ಕವೇ ಇಲ್ಲದಂತೆ ಆಗಿತ್ತು.
ಏಳು ತಿಂಗಳ ಬಳಿಕ ಇಬ್ಬರು ಮುಖಾಮುಖಿಯಾಗಿದ್ದಾರೆ. ಇಂದು ಕೋರ್ಟ್ ನಲ್ಲಿ ಎದುರು ಬದುರಾಗಿದ್ದಾರೆ. ಅತ್ತ ದರ್ಶನ್ ಜಾಮೀನು ಸಿಕ್ಕ ಮೇಲೆ ತನ್ನ ಹೆಂಡತಿ, ಮಗ, ಮೈಸೂರು ಅಂತ ಆರಾಮವಾಗಿ ಇರುವ ಪ್ರಯತ್ನ ಮಾಡ್ತಾ ಇದಾರೆ. ಈ ಮಧ್ಯೆ ಪವಿತ್ರಾ ಗೌಡ ದರ್ಶನ್ ಮುಖ ನೋಡಿ ಗದ್ಗದಿತವಾದಾಗ ಜೊತೆಗೆ ಇದ್ದ ಸಂಬಂಧಿಕರು ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಕೇಸಿನ ವಿಚಾರಣೆಯನ್ನು ಬೆಂಗಳೂರಿನ ಸೆಷನ್ಸ್ ಕೋರ್ಟ್ ಜನವರಿ 25ಕ್ಕೆ ಮುಂದೂಡಿಕೆ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅರೆಸ್ಟ್ ಆದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿಯಾಗಲು ಸಾಧ್ಯವಾಗಿರಲಿಲ್ಲ. ಜಾಮೀನಿಗೆ ಸಂಬಂಧಿಸಿದ ವಿಚಾರಣೆ ಕಂಪ್ಲೀಟ್ ಆನ್ಲೈನ್ ಮೂಲಕವೇ ನಡೆಯುತ್ತಿತ್ತು. ಜಾಮೀನು ಸಿಕ್ಕ ಬಳಿಕವೂ ಭೇಟಿಯಾಗಿರಲಿಲ್ಲ. ಜಾಮೀನು ನೀಡುವಾಗಲೇ ಕೋರ್ಟ್ ಪ್ರತಿ ತಿಂಗಳು ಕೋರ್ಟ್ ಗೆ ಹಾಜರಾಗಬೇಕೆಂಬ ಷರತ್ತು ವಿಧಿಸಿತ್ತು. ಅದರಂತೆ ಇಂದು ಆರೋಪಿಗಳೆಲ್ಲ ಕೋರ್ಟ್ ಮುಂದೆ ಹಾಜರಾಗಿದ್ದರು. ದರ್ಶನ್ ಜೊತೆಗೆ ಧನ್ವೀರ್ ಹಾಗೂ ಲಾಯರ್ ಜೊತೆಗೆ ಬಂದಿದ್ದರು. ಪವಿತ್ರಾ ಮೊದಲು ಬಂದರು. ಸಂಬಂಧಿಕರೊಟ್ಟಿಗೆ ಕೋರ್ಟ್ ಗೆ ಬಂದರು. ಕೊಲೆ ನಂತರ ಆರೋಪಿಗಳೆಲ್ಲ ಇದೇ ಮೂಲ ದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.

