ಬೆಂಗಳೂರು: ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆದು ನೇರವಾಗಿ ಬಿಜಿಎಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಇತ್ತೀಚೆಗಷ್ಟೇ ರೆಗ್ಯುಲರ್ ಬೇಲ್ ಕೂಡ ಸಿಕ್ಕಿದೆ. ಈ ಬೆನ್ನಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನಟ ದರ್ಶನ್ ನೇರವಾಗಿ ವಿಜಯಲಕ್ಷ್ಮಿ ಅವರು ವಾಸವಿರುವ ಮನೆಗೆ ಹೋಗಿದ್ದಾರೆ.
ಬಿಜಿಎಸ್ ಆಸ್ಪತ್ರೆಯಿಂದ ತೆರಳುವಾಗ ನಟ ದರ್ಶನ್ ಅವರ ಮಗನು ವಿನಿಶ್ ಕೂಡ ಇದ್ದರು. ದರ್ಶನ್ ಕಾರು ಹತ್ತಲು ಸಹಾಯ ಮಾಡಿದ್ದೆ ಮಗ ವಿನಿಶ್. ಅಂದಿನಿಂದ ಜೊತೆಗಿರುವ ಧನ್ವೀರ್ ಮಾಮೂಲಿಯಂತೆ ಕಾರು ಓಡಿಸಿಕೊಂಡು ಹೋದರು. ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ ಗೆ ತೆರಳಿದರು.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಂಧಿತರಾಗಿದ್ದ ದರ್ಶನ್, ಬಳಿಕ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಅಲ್ಲಿ ಸ್ವಲ್ಪ ಸಮಯ ಇದ್ದ ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ದಿನೇ ದಿನೇ ಉಲಗಬಣವಾಗಿತ್ತು. ಅದಕ್ಕೆ ಬಳ್ಳಾರಿ ಜೈಲಿನಲ್ಲಿಯೇ ಫಿಜಿಯೋಥೆರಪಿ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ ಬೆನ್ನು ನೋವು ವಿಪರೀತವಾದ ಕಾರಣ, ಸರ್ಜರಿಯಾಗಲೇಬೇಕು ಎಂದು ವೈದ್ಯರು ವರದಿ ನೀಡಿದ್ದರು. ಸರ್ಜರಿಯಾಗದೆ ಇದ್ದಲ್ಲಿ ದರ್ಶನ್ ಗೆ ದೈಹಿಕವಾಗಿ ಹಲವು ರೀತಿಯ ಸಮಸ್ಯೆಗಳಾಗಲಿವೆ ಎಂದು ವರದಿಯಲ್ಲಿ ಮೆನ್ಶನ್ ಮಾಡಲಾಗಿತ್ತು. ಇದರ ಆಧಾರದ ಮೇಲೆ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು.
ಈಗ ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳಿಗೂ ರೆಗ್ಯುಲರ್ ಬೇಲ್ ಸಿಕ್ಕಿದೆ. ಪವಿತ್ರಾ ಗೌಡ ಕೂಡ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ದೇವರ ದರ್ಶನವನ್ನೆಲ್ಲ ಮುಗಿಸಿ ಮನೆಗೆ ತೆರಳಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದಾರೆ.