Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದರ್ಶನ್ ಕಸ್ಟಡಿ ಅಂತ್ಯ : ಜೈಲಾ..? ಬೇಲಾ..? ಲಾಯರ್ ಹೇಳಿದ್ದೇನು..?

Facebook
Twitter
Telegram
WhatsApp

 

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಕಳೆದ ಕೆಲ ದಿನಗಳಿಂದ ಜೈಲಿನಲ್ಲಿದ್ದುಕೊಂಡು ಮುದ್ದೆ ಮುರಿಯುತ್ತಿದ್ದಾರೆ. ಅವರ ಗ್ಯಾಂಗ್ ಕೂಡ ಅಲ್ಲಿಯೇ ಇದೆ. ಅಶ್ಲೀಲ ಮೆಸೇಜ್ ಕಳುಹಿಸಿದ್ದವನನ್ನ ಚಿತ್ರ ವಿಚಿತ್ರವಾಗಿ ಕೊಂದಿದ್ದಾರೆ. ಈ ಕೇಸನ್ನು ರಾಜ್ಯ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸದ್ಯ ಒಬ್ಬೊಬ್ಬರನ್ನೇ ಬಂಧಿಸಿ, ತನಿಖೆ ನಡೆಸುತ್ತಿದೆ. ದರ್ಶನ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಆದರೆ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

 

ಈ ಬಗ್ಗೆ ದರ್ಶನ್ ವಕೀಲರಾದ ಅನಿಲ್ ಬಾಬು ಮಾತನಾಡಿ, ಕೋರ್ಟ್ ನಿರ್ದೇಶನದ ಪ್ರಕಾರ ಇಂದು ಸಂಜೆ 5 ಗಂಟೆಯ ಒಳಗೆ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಬೇಕು. ನಮ್ಮ ಪ್ರಕಾರ ಇವತ್ತು ಮಧ್ಯಾಹ್ಬ ಹಾಜರು ಮಾಡಿಯೇ ಮಾಡುತ್ತಾರೆ. ಅವರು ಇನ್ನು ಕಸ್ಟಡಿಗೆ ಕೇಳುತ್ತಾರೋ..? ಇಲ್ಲವೋ ಅನ್ನುವುದರ ಬಗ್ಗೆ ನನಗೂ ಗೊತ್ತಿಲ್ಲ. ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ನಿರ್ಧಾರವನ್ನು ನೋಡಿ ನಾವೂ ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ಬಹುತೇಕ ತನಿಖೆ ಮುಗಿದಿರಬಹುದು. ಈಗ ಬೇಲ್ ಹಾಕಬೇಕೋ..? ಬೇಡವೋ ಅನ್ನೋದನ್ನ ನಿರ್ಧಾರ ಮಾಡಿಲ್ಲ.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಚರ್ಚೆ ಮಾಡಿ ಬೇಲ್ ಗೆ ಅರ್ಜಿ ಹಾಕುತ್ತೇವೆ. ಇದಕ್ಕೆ ಒಂದು ವಾರಗಳ ಸಮಯ ಬೇಕಾಗುತ್ತದೆ. ದರ್ಶನ್ ಜೊತೆಗೆ ಮಾತುಕತೆ ಮಾಡಿಕೊಂಡು ಬಂದಿದ್ದೇನೆ. ಅವರ ಆರೋಗ್ಯ ಚೆನ್ನಾಗಿದೆ. ಡಿಎನ್‌ಎ ಟೆಸ್ಟ್ ಗೆ ಕೋರ್ಟ್ ಅನುಮತಿ ಬೇಕು. ಸ್ಯಾಂಪಲ್ ಪಡೆಯಲು ಬೇಕಾಗುತ್ತದೆ. ಆದರೆ ಪೊಲೀಸರು ತಗೊಂಡಿದ್ದಾರಾ ಇಲ್ವಾ ಎಂಬುದು ಗೊತ್ತಿಲ್ಲ. ಅದೆಲ್ಲಾ ಚಾರ್ಜ್ ಶೀಟ್ ನಲ್ಲಿ ಇರುತ್ತದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇತಿಹಾಸ ನಿರ್ಮಿಸಿದ ಬಜಾಜ್; ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಭಾರತೀಯ ಕಂಪನಿ; ಮೈಲೇಜ್ ಕೂಡ ಸೂಪರ್

• ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆಗೆ ಕೊನೆಗೂ ತೆರೆ ಬಿದ್ದಿದೆ. ಭಾರತೀಯ ಆಟೋಮೊಬೈಲ್ ಕಂಪನಿ ಬಜಾಜ್ ಶುಕ್ರವಾರ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಅದ್ದೂರಿಯಾಗಿ ನೆರವೇರಿದ ಮೊದಲ ದಿನದ ಕಾರ್ಯಕ್ರಮ

ಸುದ್ದಿಒನ್, ಚಿತ್ರದುರ್ಗ, ಜುಲೈ.05 :ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಮೊದಲ ದಿನವಾದ ಇಂದು ಸಂಜೆ ಕೇರಳದ ತಂತ್ರಿಗಳಾದ ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ದೇವಸ್ಥಾನದ

ISRO Geoportal Bhuvan | ಇಸ್ರೋದ ಅದ್ಭುತ ಸೃಷ್ಟಿ :  ಗೂಗಲ್‌ಗಿಂತ 10 ಪಟ್ಟು ಹೆಚ್ಚು ಮಾಹಿತಿ

ಸುದ್ದಿಒನ್ : ‌ನಮಗೆ ಬೇಕಾದ ಯಾವುದೇ ಮಾಹಿತಿಯನ್ನು ಗೂಗಲ್ ಸರ್ಚ್ ಮಾಡುವ ಮೂಲಕ ತಿಳಿದುಕೊಳ್ಳುತ್ತೇವೆ. ಈ ಗೂಗಲ್ ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ. ಯಾವುದೇ ರೀತಿಯ ಮಾಹಿತಿಯನ್ನು ಸೆಕೆಂಡುಗಳಲ್ಲಿ ಪಡೆಯಲು ಬೇಕಾಗಿರುವುದು ಸ್ಮಾರ್ಟ್ ಫೋನ್

error: Content is protected !!