Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದರ್ಶ‌ನ್ ಅಣ್ಣನಿಗೆ ಜನವರಿಯಲ್ಲಿ ಜಾಮೀನು : ಝೈದ್ ಖಾನ್

---Advertisement---

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ‌ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಜಾಮೀನಿಗಿಂತ ಮೊದಲು ಸೌಲಭ್ಯಗಳನ್ನ ಕೊಡಿ ಎಂಬ ಬೇಡಿಕೆಯನ್ನ ಇಟ್ಟಿದ್ದಾರೆ. ದಿಂಬು ಹಾಗೂ ಹಾಸಿಗೆ ಕೊಟ್ಟರೆ ಸಾಕು ಎಂಬ ಬೇಡಿಕೆಯನ್ನ ಇಟ್ಟಿದ್ದಾರೆ. ಆದರೆ ಅದ್ಯಾಕೋ ಏನೋ ಬೇಸಿಕ್ ಫೆಸಿಲಿಟಿ ಕೂಡ ಸಿಕ್ಕಿಲ್ಲ. ಜಾಮೀನಿನ ವಿಚಾರ ಕೂಡ ಅವರ ಅಭಿಮಾನಿಗಳಿಗೆ ಆತಂಕವಿದೆ. ಈ ಆತಂಕದ ನಡುವೆ ಇದೀಗ ಝೈದ್ ಖಾನ್ ಒಂದು ವಿಚಾರ ಹೇಳಿ ಖುಷಿ ಪಡಿಸಿದ್ದಾರೆ.

ಜನವರಿಯಲ್ಲಿ ದರ್ಶನ್ ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆ ಇದೆ‌. ಒಂದು ವೇಳೆ ಜಾಮೀನು ಸಿಗದೆ ಇದ್ದರೆ ಜನವರಿಯಲ್ಲಿ ನಾನೇ ಜೈಲಿಗೆ ಹೋಗಿ ಆಶೀರ್ವಾದ ಪಡೆದುಕೊಳ್ಳುತ್ತೇನೆ. ನೋವಿನಲ್ಲೂ ದರ್ಶನ್ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಟ್ಟಿದ್ದಾರೆ. ದರ್ಶನ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗೆ ಇರುತ್ತದೆ. ಇವು ಎರಡನ್ನು ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿದೆ. ದರ್ಶ‌ನ್ ಅಣ್ಣನಿಗೆ ಜನವರಿಯಲ್ಲಿ ಬೇಲ್ ಸಿಗುವ ನಿರೀಕ್ಷರ ಇದೆ.

ಇದೆ ವೇಳೆ ಸಿನಿಮಾ ಪೈರಸಿ ಬಗ್ಗೆ ಮಾತನಾಡಿದ್ದು, ಪೈರಸಿ ಮಾಡುವವರು ಮಾಡಲಿ, ಬೇಡ ಅಂದ್ರೆ ಬಿಡ್ತಾರಾ? ಅವರ ಕರ್ತವ್ಯ ಅವರು ಮಾಡಲಿ ಬಿಡಿ. ಆದರೆ ಅಪ್ಪಿತಪ್ಪಿ ಸಿಕ್ಕಿಬಿದ್ರೆ ಬಿಡಲ್ಲ ಅಂತ ವಾರ್ನಿಂಗ್‌ ಕೊಟ್ಟಿದ್ದಾರೆ. ಝೈದ್ ಖಾನ್ ಸದ್ಯ ತಮ್ಮ ಎರಡನೇ‌ ಸಿನಿಮಾ‌ ಕಲ್ಟ್. ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹಾವೇರಿಯಲ್ಲಿ ಪ್ರಮೋಷನ್ ಮಾಡಿದ್ದು, ಈ ವೇಳೆ ದರ್ಶ‌ನ್ ಅವರ ಬಗ್ಗೆ ಮಾತನಾಡಿದ್ದಾರೆ. ಝೈದ್ ಗೆ ಜೋಡಿಯಾಗಿ ಮಲೈಕಾ ನಟಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...