Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾಳೆ ವಿಚಾರಣೆ ನಡೆಯಲಿದೆ ದರ್ಶನ್ ಬೇಲ್ ಅರ್ಜಿ : ಮಗನಿಗೆ ದೈರ್ಯ ತುಂಬಿದ ಮೀನಾ ತೂಗುದೀಪ..!

Facebook
Twitter
Telegram
WhatsApp

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ನೂರು ದಿನಗಳ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಅಂದ್ರೆ ಶನಿವಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ 57ನೇ ಸಿಸಿಹೆಚ್ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ. ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು ಸಹ ಟೆನ್ಶನ್ ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ದರ್ಶನ್ ಗೆ ಹಲವು ಸೌಲಭ್ಯಗಳು ಜೈಲಿನಲ್ಲಿವೆ. ದರ್ಶನ್ ಗೆ ಅಂತಲ್ಲ ಅರೋಪಿಗಳಿಗೆ ಇರುವಂತ ಸೌಲಭ್ಯಗಳು. ಅಂದ್ರೆ ದರ್ಶನ್ ಮನೆಯವರ ಜೊತೆಗೆ ದೂರವಾಣಿಯ ಮೂಲಕವೂ ಮಾತನಾಡಬಹುದು. ಅದು ಕೇವಲ 5 ನಿಮಿಷ‌ ಮಾತ್ರ. ಪ್ರಿಸನ್ ಕಾಲ್ ಸಿಸ್ಟಮ್ ನಡಿಯಲ್ಲಿ ತನ್ನ ತಾಯಿಯ ಜೊತೆಗೆ ದರ್ಶನ್ ಮಾತನಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ದರ್ಶನ್ ಧೈರ್ಯ ತುಂಬುವವರೇ ಬೇಕಾಗಿರುವುದು. ಹೆತ್ತ ಕರುಳು ಮಗ ಸಂಕಟ ಪಡುವುದನ್ನು ಸಹಿಸದ ಕಾರಣ ಧೈರ್ಯ ತುಂಬಿದ್ದಾರೆ.

ದೂರವಾಣಿಯಲ್ಲಿ ಮಾತನಾಡಿದ ಮೀನಾ ತೂಗುದೀಪ, ಕೆಟ್ಟ ಗಳಿಗೆಯಿಂದ ಘಟನೆ ನಡೆದು ಹೋಗಿದೆ, ಧೈರ್ಯವಾಗಿರು. ರಾಜರಾಜೇಶ್ವರಿ ತಾಯಿ, ಚಾಮುಂಡೇಶ್ವರಿ ತಾಯಿ ಆಶೀರ್ವಾದ ನಿನ್ನ ಮೇಲಿದೆ. ಒಳ್ಳೆಯದ್ದೇ ಆಗುತ್ತೆ. ನಾನು ಮತ್ತೆ ಬಳ್ಳಾರಿಗೆ ಬರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ. ತಾಯಿಯ ಜೊತೆಗೆ ಮಾತನಾಡುತ್ತಾ, ದರ್ಶನ್ ಭಾವುಕರಾಗಿದ್ದಾರೆ ಎನ್ನಲಾಗಿದೆ.

ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ನಿನ್ನೆಯಿಂದ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ದರ್ಶನ್ ಕೂಡ ಆದಷ್ಟು ಬೇಗ ಜಾಮೀನು ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಎಲ್ಲಾ ದೇವರಿಗೂ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆಗೆ ಆಧ್ಯತೆ ನೀಡಿ : ಮಂಜುಳಾ ಶ್ರೀಕಾಂತ್

ನಾಯಕನಹಟ್ಟಿ, ಸೆ.22 : ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛತೆಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್ ಹೇಳಿದರು. ಪಟ್ಟಣದ ಎ.ಕೆ.ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಭಾನುವಾರ

ನಾಳೆ ವಿಚಾರಣೆ ನಡೆಯಲಿದೆ ದರ್ಶನ್ ಬೇಲ್ ಅರ್ಜಿ : ಮಗನಿಗೆ ದೈರ್ಯ ತುಂಬಿದ ಮೀನಾ ತೂಗುದೀಪ..!

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ನೂರು ದಿನಗಳ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ ಅಂದ್ರೆ ಶನಿವಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ 57ನೇ ಸಿಸಿಹೆಚ್ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ

ರಾತ್ರಿ ಮಲಗುವ ಮುನ್ನ ಹಾಲಿಗೆ ಅರಿಶಿನ ಬೆರೆಸಿ ಕುಡಿದರೆ ಎಷ್ಟೆಲ್ಲಾ ಉಪಯೋಗ ಗೊತ್ತಾ ?

ಸುದ್ದಿಒನ್ : ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಮೂಳೆಗಳು ಗಟ್ಟಿಯಾಗಲು ಇದು ತುಂಬಾ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳೂ ಕೂಡಾ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹಾಲಿಗೆ ಒಂದು ಚಿಟಿಕೆ

error: Content is protected !!