Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದರ್ಶನ್ ಮತ್ತೆ ಜೈಲಿಗೆ :ಜು.18ರವರೆಗೂ ನ್ಯಾಯಾಂಗ ಬಂಧನ ವಿಸ್ತರಣೆ..!

Facebook
Twitter
Telegram
WhatsApp

ನಟ ದರ್ಶನ್ ಅವರಿಗೆ ಮತ್ತೆ ಜೈಲುವಾಸ ವಿಸ್ತರಣೆಯಾಗಿದೆ. ಜುಲೈ 18ರವರೆಗೂ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಕೊಲೆ ಕೇಸಿನಲ್ಲಿ ಬಂಧನವಾಗಿದ್ದ ದರ್ಶನ್ ಅವರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಿದ್ದರು‌. ಕೋರ್ಟ್ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಇನ್ನು ಹದಿನಾಲ್ಕು ದಿನಗಳ ಕಾಲ ದರ್ಶನ್ ಮತ್ತು ಸಂಗಡಿಗರು ಜೈಲಿನಲ್ಲೇ ಇರಬೇಕಾಗಿದೆ.

ಕಳೆದ ಬಾರಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಅವಧಿ ಇಂದಿಗೆ ಮುಕ್ತಾಯವಾದ ಬೆನ್ನಲ್ಲೇ ಇಂದು ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ತುಮಕೂರು ಹಾಗೂ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇನ್ನು ಪವಿತ್ರಾ ಗೌಡ ಅವರನ್ನು ಪ್ರತ್ಯೇಕವಾಗಿ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಮುಂದಿನ14 ದಿನಗಳ ಕಾಲ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸುತ್ತಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಎತ್ತಾಕಿಕೊಂಡು ಬಂದು ದರ್ಶನ್ ಅಂಡ್ ಗ್ಯಾಂಗ್ ಹೊಡೆದಿದ್ದಾರೆ. ಅದು ಕೊಲೆಯ ಹಂತಕ್ಕೆ ತಲುಪಿದ್ದು ಈಗ ಹದಿನೇಳು ಮಂದಿ ಜೈಲುವಾಸದಲ್ಲಿದ್ದಾರೆ. ದರ್ಶನ್ ಅವರನ್ನು ಬಿಡಿಸಲು ಪತ್ನಿ ಪ್ರಯತ್ನ ಪಡುತ್ತಿದ್ದಾರೆ. ಪವಿತ್ರಾ ಗೌಡರನ್ನು ನೋಡಲು ಅಪ್ಪ, ಅಮ್ಮ, ತಮ್ಮನು ಬರುತ್ತಿದ್ದಾರೆ. ಪವಿತ್ರಾ ಅವರನ್ನು ಕೂಡ ಪೋಷಕರು ಬಿಡಿಸಬಹುದು. ಆದರೆ ಇಲ್ಲಿ ಮಧ್ಯದಲ್ಲಿ ತಗಲಾಕಿಕೊಂಡ ಚಿತ್ರದುರ್ಗದ ಹುಡುಗರ ಗತಿ ಏನು ಎಂಬುದೇ ಕುಟುಂಬಸ್ಥರ ಪ್ರಶ್ನೆಯಾಗಿದೆ. ಈಗಾಗಲೇA5 ಆರೋಪಿ ನಂದೀಶ್ ಅವರ ಅಕ್ಕ ಕಣ್ಣೀರು ಹಾಕುತ್ತಾ ಸಮಸ್ಯೆ ಹೇಳಿಕೊಂಡಿದ್ದಾರೆ. ಅವರಿಗೆ ವಕೀಲರನ್ನು ಸಹ ನೇಮಿಸಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Dengue fever : ಡೆಂಗ್ಯೂ ಜ್ವರ ಇದ್ದರೆ, ನೀವು ಯಾವ ಹಣ್ಣುಗಳನ್ನು ತಿನ್ನಬೇಕು ? ಎಳ ನೀರು ಒಳ್ಳೆಯದೇ ?

  ಸುದ್ದಿಒನ್ : ಮಳೆಗಾಲ ರೋಗಗಳ ಕಾಲ. ಮಳೆಗಾಲದಲ್ಲಿ ಡೆಂಗ್ಯೂ ಭೀತಿ ಹೆಚ್ಚು. ಮಳೆಗಾಲದಲ್ಲಿ ಹಲವೆಡೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚುತ್ತದೆ. ಈ ಸೊಳ್ಳೆಗಳು ಮಲೇರಿಯಾ, ಚಿಕೂನ್‌ಗುನ್ಯಾ, ಡೆಂಗ್ಯೂ ಮುಂತಾದ ಅಪಾಯಕಾರಿ ರೋಗಗಳನ್ನು

ಈ ರಾಶಿಯ ವ್ಯಾಪಾರಸ್ಥರಿಗೆ ಕೃಷಿಕರಿಗೆ ಉತ್ತಮ ಕಾಲಾವಧಿ, ಆದರೆ ಈ ರಾಶಿಗಳಿಗೆ ಕುಜ ಕೇತು ಗೃಹಗಳಿಂದ ಒಂದು ರೀತಿಯ ಆತಂಕ

ಈ ರಾಶಿಯ ವ್ಯಾಪಾರಸ್ಥರಿಗೆ ಕೃಷಿಕರಿಗೆ ಉತ್ತಮ ಕಾಲಾವಧಿ, ಆದರೆ ಈ ರಾಶಿಗಳಿಗೆ ಕುಜ ಕೇತು ಗೃಹಗಳಿಂದ ಒಂದು ರೀತಿಯ ಆತಂಕ. ಭಾನುವಾರ- ರಾಶಿ ಭವಿಷ್ಯ ಜುಲೈ-7,2024 ಸೂರ್ಯೋದಯ: 05:51, ಸೂರ್ಯಾಸ್ತ : 06:50 ಶಾಲಿವಾಹನ

INDIA Vs ZIMBABWE : 13 ರನ್‌ಗಳ ಅಂತರದಿಂದ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸೋಲು

  ಸುದ್ದಿಒನ್ : ಟಿ20 ವಿಶ್ವಕಪ್ ಗೆದ್ದ ಭಾರತ ಆ ಬಳಿಕ ಮೊದಲ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದೆ.  ಜಿಂಬಾಬ್ವೆ ವಿರುದ್ಧ 13 ರನ್‌ಗಳಿಂದ ಸೋತಿತು. ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್

error: Content is protected !!