ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,ಡಿ.31 : ಎಲ್ಲಾ ಇಂದ್ರಿಯಗಳನ್ನು ಜಾಗೃತಿಗೊಳಿಸಿ ಅಭಿನಯಿಸುವ ನೃತ್ಯಕ್ಕೆ ತನ್ನದೆ ಆದ ವಿಶಿಷ್ಠತೆಯಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಕೆ.ರಾಜೀವಲೋಚನ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ನಡೆದ ಅಂಜನಾ ನೃತ್ಯ ಕಲಾ ಕೇಂದ್ರದ 38 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಅಂಜನಾ ನೃತ್ಯ ಕಲಾ ಕೇಂದ್ರದ ಶ್ರೀಮತಿ ಡಾ.ನಂದಿನಿ ಮತ್ತು ವಿದ್ವಾನ್ ಶಿವಪ್ರಕಾಶ್ ದಂಪತಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಟ್ಟಿದ್ದಾರೆ. ಲಲಿತಕಲೆ ದೇಶದ ವಿಶೇಷ ಸಂಸ್ಕøತಿ. ಇಂತಹ ಕಲೆಯನ್ನು ಅವಲೋಕನ ಮಾಡಿದರೆ ನೃತ್ಯಕ್ಕೆ ಎಂತಹ ವಿಶೇಷತೆಯಿದೆ ಎನ್ನುವುದು ಗೊತ್ತಾಗುತ್ತದೆ.
ಭರತಮುನಿ ರಚಿಸಿರುವುದು ನಾಟ್ಯಶಾಸ್ತ್ರ. ವಿಶಾಲವಾದ ಅಭಿವ್ಯಕ್ತಿ ಈ ಕಲೆಯಲ್ಲಿದೆ. ಭಾರತೀಯ ಕಲೆ, ಪರಂಪರೆ ಮೇಲೆ ಅನೇಕ ಸಂಸ್ಕøತಿಗಳ ದಾಳಿಯಾಗಿದೆ. ಅದ್ಬುತವಾದ ಕಲಾ ಪ್ರಕಾರ ನೃತ್ಯಕ್ಕೆ ಎಲ್ಲರೂ ಸಹಕಾರ ಪ್ರೋತ್ಸಾಹ ನೀಡುವಂತೆ ಕೋರಿದರು.
ನಾಟ್ಯರಂಜಿನಿ ನೃತ್ಯ ಕಲಾಕೇಂದ್ರದ ಭರತನಾಟ್ಯ ಗುರು ವಿದ್ವಾನ್ ಜಿ.ಕಿರಣ್, ಕೊಳಲು ವಾದಕ ಗುರುರಾಜ್, ಜಾನಪದ ಹಾಡುಗಾರ ಗಂಗಾಧರ್ ಇವರುಗಳನ್ನು ಸನ್ಮಾನಿಸಲಾಯಿತು.
ಶ್ರೀಮತಿ ಡಾ.ನಂದಿನಿ, ವಿದ್ವಾನ್ ಸಿ.ಆರ್.ಶಿವಪ್ರಕಾಶ್ ವೇದಿಕೆಯಲ್ಲಿದ್ದರು.
ಅಂಜನಾ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಅನೇಕ ಪ್ರಕಾರಗಳ ನೃತ್ಯಗಳನ್ನು ಪ್ರದರ್ಶಿಸಿದರು.