ಚಿತ್ರದುರ್ಗ, (ಅ.08) : ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಲೇಔಟ್ ನಿವಾಸಿ ದಾಕ್ಷಾಯಿಣಮ್ಮ (60) ಹೃದಯಾಘಾತದಿಂದ ಇಂದು (ಶನಿವಾರ) ಮಧ್ಯಾಹ್ನ 1:40ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಗ ವೀರಶೈವ ಸಮಾಜದ ಮುಖಂಡ ಜಿತೇಂದ್ರ ಹುಲಿಕುಂಟೆ ಮತ್ತು ಓರ್ವ ಮಗಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ನಾಳೆ (ಭಾನುವಾರ) ಮಧ್ಯಾಹ್ನ 1 ಗಂಟೆ ನಂತರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.