ಬೆಂಗಳೂರು: ನನ್ನ ಮೇಲೆ ಏಕವಚನ ಆದರೂ ಮಾಡಲಿ, ಬಹುವಚನ ಆದರೂ ಮಾಡಲಿ, ಇನ್ನು ನೂರು ಮಾತಾಡಲಿ. ನನ್ನ ಬಗ್ಗೆ ಈ ರಾಜ್ಯದ ಯುವಕರೇನಿದ್ದಾರೆ, ಕಷ್ಟಪಟ್ಟು ಓದಿ, ಉದ್ಯೋಗ ತೆಗೆದುಕೊಳ್ಳಬೇಕುವ ಎಂದು ಆಸೆಯಿಂದ ಇದ್ದವರಿಗೆ, ಇಂಥ ಇಬ್ಬ ಭ್ರಷ್ಟ, ವಿಶ್ವಮಾನವ ಭ್ರಷ್ಟ ಮಂತ್ರಿಯಿಂದ ಹೀಗೆ ಆಗ್ತಾ ಇದೆಯಲ್ಲ ಅಂತ ನನಗೆ ಬಹಳ ದುಗುಡ ಆಗುತ್ತಿದೆ ಎಂದು ಅಶ್ವತ್ಥ್ ನಾರಾಯಣ್ ಅವರು ಏಕವಚನದಲ್ಲಿವಮಾತನಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಶ್ವಮಾನವ ಪಿತಾಮಹ.. ಹಗರಣಗಳಿಗೆ ಪಿತಾಮಹ ಅವರೇ ಎಂದ ಮೇಲೆ ರಾಮನಗರ, ಗುಲ್ಬರ್ಗ, ಬೆಂಗಳೂರು ಸೇರಿದಂತೆ ಹಲವೆಡೆ ನಡೆದದ್ದಕ್ಕೆಲ್ಲಾ ಇವರೇ ಪಿತಾಮಹ ಇರಬೇಕಲ್ಲವಾ. ಎನ್ಇಪಿಯನ್ನು ಮೊದಲು ನಾನೇ ಜಾರಿಗೆ ತಂದಿದ್ದು ಅಂತ ಬಹಳ ಹೊಗಳಿಕೆಯಿಂದ ಮಾತನಾಡುತ್ತಾರೆ. ಆ ಬಗ್ಗೆ ಆಮೇಲೆ ಮಾತನಾಡೋಣಾ. ಒಬ್ಬ ಬಿಜೆಪಿಯವರು ಒಳ್ಳೋಳೆ ಯೂನಿವರ್ಸಿಟಿ ಮಾಡಲು ಯತ್ನಿಸಿದ್ದಾರೆ. ಇನ್ನು ಏನೇನೋ ಇದೆ. ಅದನ್ನು ಆಮೇಲೆ ಮಾತನಾಡೋಣಾ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆಯವರ ನೋಟೀಸ್ ಬಗ್ಗೆ ಮಾತನಾಡಿದ್ದು, ಪೊಲೀಸರು ಬಹಳ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಚೆನ್ನಾಗಿ ನೋಟೀಸ್ ಕೊಡೋದು, ವಿರೋಧ ಪಾರ್ಟಿಯವರಿಗೆ, ಸ್ಪೋಕ್ಸ್ ಮೆನ್ ಗೆ. ಯಾರು ಅವರ ಮೇಲೆ ಆರೋಪ ಮಾಡುತ್ತಾರೋ ಅವರಿಗೆಲ್ಲಾ ಕೊಡ್ತಾ ಇದ್ದಾರೆ. ಈಗ ನೋಟೀಸ್ ಕೊಡುತ್ತಿರುವುದು ಬಹಳ ಒಳ್ಳೆಯ ಸಂಪ್ರದಾಯ ಫಾಲೋ ಮಾಡ್ತಾರೆ. ಅದಕ್ಕೆ ಅವರನ್ನು ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಅದೇ ನೋಟೀಸನ್ನು ಬಿಜೆಪಿಗೆ ಕೊಡಬೇಕಲ್ಲವಾ ಎಂದಿದ್ದಾರೆ.