ಅಶೋಕ್, ವಿಜಯೇಂದ್ರ ಮನೆ ಮುಂದೆ ಕಸ ಸುರಿಸ್ತೀನಿ ಎಂದ ಡಿ.ಕೆ.ಶಿವಕುಮಾರ್!

1 Min Read

ನಗರದ ಕಸ ವಿಲೇವಾರಿಗೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಕಸ ವಿಲೇವಾರಿ ಸಮರ್ಪಕವಾಗಿ ಮಾಡುತ್ತಿಲ್ಲ.  ಎಂದು ಆರೋಪ ಕೇಳಿಬರುತ್ತಿದೆ.ಆದರೆ ಇದಕ್ಕೆ ಡಿಕೆ ಶಿವಕುಮಾರ್ ಬಿಜೆಪಿ ಶಾಸಕರಿಗೆ ಎಚ್ಚರಿಗೆ ನೀಡಿದ್ದಾರೆ.

ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ‘ಬೆಂಗಳೂರಿನಲ್ಲಿ ಸರಿಯಾಗಿ ಕಸ ವಿಲೇವಾರಿ ನಡಸುತ್ತಿಲ್ಲ. ಬೆಂಗಳೂರಿನ ಕಸ ಎತ್ತಲು ಸಹ ಇವರಿಗೆ ಯೋಗ್ಯತೆ ಇಲ್ಲ. ಅವರಿಗೂ ಅನುದಾನ ಕೊಟ್ಟಿಲ್ಲ. ಇನ್ನೆರಡು ದಿನ ಕಳೆದರೆ ಸಿಲಿಕಾನ್ ಸಿಟಿ ಗಾರ್ಬೇಜ್ ಸಿಟಿ‌ ಆಗುತ್ತೆ.  ಎಂದಿದ್ದಾರೆ.

ನಗರದ ಕಸವನ್ನು ಎಲ್ಲಾದರೂ ಒಂದು ಕಡೆ ವಿಲೇವಾರಿ ಮಾಡಲೇಬೇಕು. ಅಲ್ಲೂ ಬೇಡ, ಇಲ್ಲೂ ಬೇಡ ಎಂದರೆ ಕಸವನ್ನು ಎಲ್ಲಿಗೆ ಹಾಕಬೇಕು? ಸುಮ್ಮನೆ ತಕರಾರು ತೆಗೆದರೆ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಅವರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿಯ ಮುಂದೆಯೇ ಕಸದ ರಾಶಿ ಹಾಕಿಸಬೇಕಾಗುತ್ತದೆ,” ಎಂದು ವಾರ್ನಿಂಗ್ ನೀಡಿದರು.

ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯುವ ಉದ್ದೇಶದಿಂದ ಬಿಜೆಪಿಯ ಎಲ್ಲಾ ಶಾಸಕರು ಕಸದ ನೆಪವೊಡ್ಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. . ಎಲ್ಲರೂ ಗೌರವದಿಂದ ವರ್ತಿಸಿದರೆ ಸರಿ, ಇಲ್ಲದಿದ್ದರೆ ನಾವು ಕರುಣೆ ತೋರಿಸುವುದಿಲ್ಲ.ಕಸ ವಿಲೇವಾರಿಯಂತಹ ಅಗತ್ಯ ಸೇವೆಗಳಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ ಡಿ.ಕೆ ಶಿವಕುಮಾರ್

Share This Article
Enable Notifications OK No thanks