Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೃಹಲಕ್ಷ್ಮಿ ಫಲಾನುಭವಿಗಳೊಂದಿಗೆ ಡಿ.ಕೆ.ಶಿವಕುಮಾರ್ ಸಂವಾದ :  ಬಾಗಿನ ನೀಡಿ, ಭೋಜನ ಸವಿದ ಸಿಎಂ!

D.K. Shivakumar interacts with Gruhalakshmi beneficiaries; CM offer bagina and enjoys a meal!
---Advertisement---

ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ “ಗೃಹಲಕ್ಷ್ಮಿ” ಯೋಜನೆಯ ಫಲಾನುಭವಿಗಳೊಂದಿಗೆ ಆತ್ಮೀಯ ಸಂವಾದ ನಡೆಸಿದರು.

ಈ ವೇಳೆ ಮಹಿಳೆಯರು ಈ ಯೋಜನೆಯಿಂದ ತಮ್ಮ ಬದುಕಿನಲ್ಲಿ ಮೂಡಿರುವ ಬದಲಾವಣೆಗಳು, ತಮಗೆ ದೊರೆತಿರುವ ಆರ್ಥಿಕ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಅನುಭವಗಳನ್ನು ಮುಖ್ಯಮಂತ್ರಿಗಳೊಂದಿಗೆ ಹಂಚಿಕೊಂಡರು.

ಬಳಿಕ ಫಲಾನುಭವಿಗಳು ತಾವೇ ಕೈಯಾರೆ ತಯಾರಿಸಿದ್ದ ಪುಟ್ಟದಾದ ತೊಟ್ಟಿಲು, ದೀಪ ಸೇರಿದಂತೆ ವಿವಿಧ ಕರಕುಶಲ ವಸ್ತುಗಳನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದರು. ಮಹಿಳೆಯರ ಕೈಯಲ್ಲಿ ಅರಳಿದ ಸೃಜನಶೀಲತೆ, ಅವರ ಮಾತುಗಳಲ್ಲಿದ್ದ ಆತ್ಮವಿಶ್ವಾಸ, ಮೊಗದಲ್ಲಿದ್ದ ಸಂತಸ ಕಂಡು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಗೃಹಲಕ್ಷ್ಮಿಯರಿಗೆ ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಸೌಭಾಗ್ಯ, ಸಮೃದ್ಧಿ ಮತ್ತು ಗೌರವದ ಸಂಕೇತವಾದ ಬಾಗಿನ ನೀಡಿ, ಅವರೊಂದಿಗೆ ಕುಳಿತು ಭೋಜನ ಸವಿದರು.

ಮಹಿಳೆಯರು ಕೇವಲ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಪಾಲುದಾರರಾಗದೆ, ಸ್ವಂತ ದುಡಿಮೆ, ಉದ್ಯಮಶೀಲತೆ ಮತ್ತು ಸ್ವಾವಲಂಬನೆಯ ಮೂಲಕ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುತ್ತಿರುವುದು “ಗೃಹಲಕ್ಷ್ಮಿ” ಯೋಜನೆಯ ಆಶಯಕ್ಕೆ ಮತ್ತಷ್ಟು ಅರ್ಥ ತುಂಬಿದೆ. ಮಹಿಳೆಯರ ಬದುಕಿನಲ್ಲಿ ಮೂಡುತ್ತಿರುವ ಈ ಆತ್ಮವಿಶ್ವಾಸ ಮತ್ತು ಸಂತಸವೇ ಯೋಜನೆಯ ಆಶಯಕ್ಕೆ ಸಾರ್ಥಕತೆ ನೀಡಿದೆ.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಎಚ್.ಎಂ.ರೇವಣ್ಣ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ತುಷಾರ್ ಗಿರಿನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕ ಡಾ.ಮಹೇಶ್ ಬಾಬು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now