ನವದೆಹಲಿ: ಹಲವು ತಿಂಗಳಿನಿಂದ ಸಿಲಿಂಡರ್ ಬೆಲೆಯಲ್ಲಿ ಏರಿಕೆಯನ್ನೇ ಕಾಣುತ್ತಿದ್ದ ಗ್ರಾಹಕರಿಗೆ ಕೊಂಚ ಸಮಾಧಾನ ಸಿಕ್ಕಿದೆ. ಜೂನ್ 1 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಲಾಗಿದ್ದು, ಪ್ರತಿ ಸಿಲಿಂಡರ್ ಗೆ 135 ರೂಪಾಯಿ ಇಳಿಕೆ ಮಾಡಲಾಗಿದೆ.
ಕಳೆದ ತಿಂಗಳು ಮೇ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ 100 ರೂಪಾಯಿ ಬೆಲೆ ಏರಿಕೆಯಾಗಿತ್ತು. ಈ ಮೂಲಕ 2,355 ರೂಪಾಯಿ ಆಗಿತ್ತು. ಗೃಹ ಬಳಕೆಯ ಸಿಲಿಂಡರ್ ನಲ್ಲಿ ಕೂಡ ಬೆಲೆ ಏರಿಕೆಯಾಗಿತ್ತು. 50 ರೂಒಅಯಿ ಹೇರಿಕೆ ಮಾಡುವ ಮೂಲಕ ಗ್ರಾಹಕರ, ಮಹಿಳೆಯರ ತಲೆ ಬಿಸಿ ಮಾಡಿತ್ತು.
ಈ ಸಂಬಂಧ ಕೇಂದ್ರ ಸರ್ಕಾರ ಹಣದುಬ್ಬರ ನಿಯಂತ್ರಣಕ್ಕಾಗಿ ಹಲವು ಕ್ರಮವನ್ನು ಕೈಗೊಂಡಿದ್ದು, ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಗಗನಕ್ಕೇರಿದ್ದ ಅಗತ್ಯ ವಸ್ತುಗಳ ಬೆಲೆಯನ್ನು ತಗ್ಗಿಸುವ ಪ್ರಯತ್ನವೂ ಆಗಿದೆ.