ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಗೆ ದೂರು : ರಕ್ಷಿತಾ, ವಿಜಯಲಕ್ಷ್ಮೀ ಪೋಸ್ಟ್ ಗೆ ಏನಂದ್ರು ರಮ್ಯಾ..?

1 Min Read

ಬೆಂಗಳೂರು: ದರ್ಶ‌ನ್ ಅಭಿಮಾನಿಗಳ ಹೆಸರಲ್ಲಿ ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಗಳನ್ನ ಹಲವರು ಮಾಡಿದ್ದಾರೆ. ಆ ಒಂದೊಂದು ಸ್ಕ್ರೀನ್ ಶಾಟ್ ಗಳನ್ನು ರಮ್ಯಾ ಅವರು ತಮ್ಮ ಸೋಷಿಯಲ್ ಮೀಡಿಯಾದ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆ ಮೆಸೇಜ್ ಗಳನ್ನ ಓದಿದ್ರೆ ಖಂಡಿತ ಎಂಥವರಿಗೆ ಆಗಲಿ ಅಸಹ್ಯವಾಗುತ್ತೆ. ಇದೀಗ ಆ ಸಂಬಂಧ ರಮ್ಯಾ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದೇನೆ. ಸೈಬರ್ ಕ್ರೈಂ ಪೊಲೀಸರು ಅಲ್ಲಿಯೇ ಇರುವ ಕಾರಣ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ಲರೂ ಒಂದಾಗಬೇಕು ನಿಜ. ಆದರೆ ಯಾಕೆ ಆಗುತ್ತಿಲ್ಲ ಎಂಬುದು ಗೊತ್ತಿಲ್ಲ. ಕೆಲವರಿಗೆ ತಮ್ಮ ಚಿತ್ರಗಳ ಮೇಲೆ ಎಲ್ಲಿ ಪ್ರಭಾವ ಬೀಳುತ್ತದೆಯೋ ಎಂಬ ಆತಂಕವೂ ಇರಬಹುದು. ಅಭಿಮಾನಿಗಳ ನಡುವೆ ಸಂಘರ್ಷ ಶುರುವಾಗುತ್ತರ ಅಂತಾನೂ ಕೆಲವರು ಅಂದುಕೊಳ್ಳಬಹುದು. ಇನ್ನೂ ಕೆಲವರು ಮೌನವಾಗಿರುವುದೇ ಒಳ್ಳೆಯದು ಅಂತಾನು ಅಂದುಕಿಂಡಿರಬಹುದು. ಉಳಿದವರು ಇದು ಎಲ್ಲಿಯವರೆಗೆ ಹೋಗುತ್ತೋ ನೋಡೋಣಾ ಎಂಬ ಕುತೂಹಲವೂ ಇರಬಹುದು. ಹೀಗಾಗಿ ಹಲವರು ಬರುವುದಿಲ್ಲ ಎಂದಿದ್ದಾರೆ.

ಇನ್ನು ವಿಜಯಲಕ್ಷ್ಮೀ ಹಾಗೂ ರಕ್ಷಿತಾ ಅವರು ಹಾಕಿದ ಸ್ಟೋರಿ ಬಗ್ಗೆ ಮಾತನಾಡಿದ ರಮ್ಯಾ, ನಂಗೆ ಗೊತ್ತಿಲ್ಲ. ವಿಜಿ ಆಗಲಿ ರಕ್ಷಿತಾ ಆಗಲಿ ಆ ರೀತಿ ಮಾತನಾಡುವವರು ಅಲ್ಲ. ಅವರು ಹಾಕಿರುವುದು ನನ್ನ ವಿಚಾರಕ್ಕಲ್ಲ ಅನ್ನಿಸುತ್ತೆ. ಅಶ್ಲೀಲ ಪದಗಳನ್ನು ಮಾತನಾಡುವಾಗ ಎಚ್ಚರ ಇರಲಿ ಎಂಬ ಅರ್ಥದಲ್ಲಿ ಹಾಕಿದ್ದಾರೆ. ನನ್ನ ಕೆಲಸ ನಾನು ಮಾಡಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks