Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದೆಹಲಿಯಲ್ಲಿ ನಡೆದ CWC ಸಭೆ ಅಂತ್ಯ : ಸಿದ್ದರಾಮಯ್ಯ ಏನಂದ್ರು..?

---Advertisement---

ನವದೆಹಲಿ: ಸಿಎಂ ಸಿದ್ದರಾಮಯ್ಯ ಅವರನ್ನು ಮಾತ್ರ Cwc‌ ಸಭೆಗೆ ಹೈಕಮಾಂಡ್ ಆಹ್ವಾನ ಮಾಡಿದ ಹಿನ್ನಲೆ ಎಲ್ಲರ ಚಿತ್ತ ಅತ್ತ ಕಡೆಯೇ ನೆಟ್ಟಿತ್ತು. ಇದೀಗ ಇಂದು ನಡೆದ CWC ಸಭೆ ಅಂತ್ಯವಾಗಿದೆ. ಇಂದ್ರಾಭವನದಲ್ಲಿ ಈ ಸಭೆ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಮುಂಬರುವ ಚುನಾವಣೆಗಳ ಬಗ್ಗೆ ಸಾಕಷ್ಟು ಚರ್ಚೆಯನ್ನ ನಡೆಸಿದ್ದಾರೆ.

ಇನ್ನು ರಾಜ್ಯದಲ್ಲಿ ಕುರ್ಚಿ ಕದನದ ವಿಚಾರ ಯಾವ ಹಂತ ತಲುಪಿದೆ ಅನ್ನೋದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಸಭೆಗೆ ಆಹ್ವಾನಿಸಿದ್ದರ ಹಿನ್ನೆಲೆ ಹೈಕಮಾಂಡ್ ಬಗ್ಗೆ ಸಿದ್ದರಾಮಯ್ಯ ಅವರಿಗೆ ವಿಶ್ವಾಸ ಜಾಸ್ತಿಯಾಗಿದೆ. ಹೀಗಾಗಿ ಸಮಯ ಸಿಕ್ಕಿದರೆ ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಬಹುದು. ಅಷ್ಟೇ ಅಲ್ಲ ಸಚಿವ ಸಂಪುಟದ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.

 

ಕುರ್ಚಿ ಕದನದ ವಿಚಾರ ಬಂದಾಗೆಲ್ಲಾ ಪದೇ ಪದೇ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೆಸರನ್ನೇ ತೆಗೆದುಕೊಳ್ಳುತ್ತಾರೆ. ಹೈಕಮಾಂಡ್ ಹೇಳಿದಂತೆ ಕೇಳುವುದಕ್ಕೆ ಬದ್ಧ ಎನ್ನುತ್ತಾರೆ. ಇದರ ಬೆನ್ನಲ್ಲೇ ದೆಹಲಿಯಲ್ಲೂ ದಲಿತ ಸಿಎಂ ಕೂಗು ಕೇಳಿಸಿದೆ. ಕೆಲವು ಮುಖಂಡರಿಂದ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಅಂತಿದ್ದಾರೆ. ಒಂದು ವೇಳೆ ಸಿಎಂ ಬದಲಾಯಿಸಲೇಬೇಕು ಅನ್ನುವುದಾದರೆ ಪರಮೇಶ್ವರ್ ಅವರಿಗೆ ನೀಡಿ ಎಂದು ತುಮಕೂರು – ಬೆಂಗಳೂರಿನಿಂದ ಹೋದಂತ ಹತ್ತಕ್ಕೂ ಹೆಚ್ಚು ಮುಖಂಡರಿಂದ ಈ ಒತ್ತಡ ಕೇಳಿ ಬಂದಿದೆ. ಈಗ ಸಿಎಂ ಬದಲಾವಣೆಯ ಜೊತೆಗೆ ದಲಿತ ಸಿಎಂ ಕೂಗು ಜೋರಾಗುವಂತೆ ಕಾಣಿಸುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...