ಚಿಂತನ್ ಶಿಬಿರದಲ್ಲಿ ಕಾಂಗ್ರೆಸ್ ಕೈಗೊಂಡ ಮಹತ್ವದ ನಿರ್ಧಾರಗಳು..!

ಸುದ್ದಿಒನ್ ವೆಬ್ ಡೆಸ್ಕ್

ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ಚಿಂತನ್ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಭಾನುವಾರ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

• ಒಂದೇ ಕುಟುಂಬದ ಒಬ್ಬರಿಗೆ ಮಾತ್ರ ಟಿಕೆಟ್ ನೀಡುವ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದೆ.
• ರಾಹುಲ್ ಗಾಂಧಿ ದೇಶಾದ್ಯಂತ ಪ್ರತಿ ರಾಜ್ಯದಲ್ಲಿ 90 ಕಿ.ಮೀ ಪಾದಯಾತ್ರೆ ಮಾಡಲು ನಿರ್ಧರಿಸಿದೆ.
• ಒಬ್ಬ ನಾಯಕ ಐದು ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಉಳಿಯಲು ನಿರ್ಧರಿಸಿದಲಾಗಿದೆ.
• ಒಂದೇ ಕುಟುಂಬದಿಂದ ಬೇರೆಯವರು ಬಂದರೆ.. ಪಕ್ಷದಲ್ಲಿ ಕನಿಷ್ಠ ಮೂರು ವರ್ಷ ಕೆಲಸ ಮಾಡಬೇಕೆಂದು ಷರತ್ತು ವಿಧಿಸಿದ್ದಾರೆ.ಸ
• ಇದೇ ವೇಳೆ ಯುವಕರಿಗೆ ಶೇ.50ರಷ್ಟು  ನೀಡಲು ಪಕ್ಷ ನಿರ್ಧರಿಸಿದೆ. ಬ್ಲಾಕ್ ಮಟ್ಟದಿಂದ ಸಿಡಬ್ಲ್ಯೂಸಿ ಹಂತದವರೆಗೆ ಶೇ.50ರಷ್ಟು ಯುವಕರನ್ನು ಬಳಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು.
• ಶೇ. 50 ರಷ್ಟು ಹುದ್ದೆಗಳನ್ನು ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತ ಮಹಿಳೆಯರಿಗೆ ನೀಡಲು ನಿರ್ಧರಿಸಲಾಯಿತು.
• ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇವಿಎಂಗಳನ್ನು ರದ್ದುಗೊಳಿಸಲು  ನಿರ್ಧರಿಸಿದೆ.
• ಪೇಪರ್ ಬ್ಯಾಲೆಟ್ ಮತದಾನ ವ್ಯವಸ್ಥೆ ಜಾರಿಗೆ ತರಲಾಗುವುದು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ”ಕಾಂಗ್ರೆಸ್ ಪಕ್ಷ ತನ್ನ ಪಕ್ಷದ ನಾಯಕರಿಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿದೆ. ಬಿಜೆಪಿ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಲ್ಲಿ ಈ ಸ್ಥಿತಿ ಇಲ್ಲ. ಇನ್ನೂ ಕಾಂಗ್ರೆಸ್ ನಾಯಕರು ನೋಡುತ್ತಾ ಕುಳಿತರೆ ಆಗುವುದಿಲ್ಲ. ಎಲ್ಲರೂ ಸಾರ್ವಜನಿಕವಾಗಿ ಜನರ ಮಧ್ಯೆ ಹೋಗಿ ಅವರ ಸಮಸ್ಯೆಗಳನ್ನು ಅರಿಯಬೇಕು. ಜನರೊಂದಿಗಿನ ಪಕ್ಷದ ಸಂಬಂಧಗಳನ್ನು ಮತ್ತೆ ಪುನಃಸ್ಥಾಪಿಸಬೇಕಾಗಿದೆ. ಜನರ ನಡುವೆ ಯಾತ್ರೆಗಳನ್ನು, ಪ್ರವಾಸಗಳನ್ನು ಮಾಡಬೇಕು. ದೇಶದಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಆಡಳಿತಾರೂಢ ಬಿಜೆಪಿ ವ್ಯವಸ್ಥಿತವಾಗಿ ಎಲ್ಲಾ ವ್ಯವಸ್ಥೆಗಳನ್ನು ನಾಶ ಮಾಡುತ್ತಿದೆ.

ಆರ್ಥಿಕತೆ ಕುಸಿಯುತ್ತಿದೆ, ನಿನ್ನೆ ಮೊನ್ನೆಯವರೆಗೂ ಗೋಧಿ ರಫ್ತು ಮಾಡುತ್ತೇವೆ ಎನ್ನುತ್ತಿದ್ದವರು, ಇದೀಗ ದಿಢೀರ್ ನಿಲ್ಲಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಕಾರ್ಪೊರೇಟ್‌ ಸಂಸ್ಥೆಗಳಿಗೆ ರೆಡ್ ಕಾರ್ಪೆಟ್ ಹಾಸಿ, ಯುವಕರನ್ನು ಗಾಳಿಗೆ ತೂರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಣದುಬ್ಬರ ಏರಿಕೆಯಾಗಲಿದೆ ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *