ಮೈಸೂರು: ಅದೆಷ್ಟೋ ವಿಡಿಯೋಗಳು ನಮ್ಮ ಕಣ್ಣ ಮುಂದಿವೆ. ಸಾವು ಯಾವಾಗ ಯಾರಿಗೆ, ಹೇಗೆ ಬರುತ್ತೆ ಅನ್ನೋದು ಗೊತ್ತೆ ಆಗಲ್ಲ. ಆಯಸ್ಸು ಮುಗಿದರೆ ಕೆಲವೊಂದು ನೆಪ, ಇನ್ನು ಕೆಲವೊಮ್ಮೆ ನೆಪಗಳೇ ಬೇಡ. ಸೋಷಿಯಲ್ ಮೀಡಿಯಾದಲ್ಲೊಂದು ವಿಡಿಯೋ ಹರಿದಾಡುತ್ತಿದೆ. ಆತನಿಗೆ ಕೊನೆ ಬಾರಿ ಅನ್ನದ ಋಣವೇ ಇರ್ಲಿಲ್ಲವೇನೋ ಎಂಬ ಬೇಸರ ಕಾಡದೆ ಇರದು.
ಹೌದು, ಹೊಟೇಲ್ ಗೆ ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ತಿಂಡಿ ತಿನ್ನುವ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ನಿತಿನ್ ಮೃತ ವಿದ್ಯಾರ್ಥಿ. ನಾಲ್ಕನೇ ವರ್ಷದ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದರು.
ನಿತಿನ್ ತಿಂಡಿ ತಿನ್ನೋದಕ್ಕೆಂದು ತನ್ನ ಸ್ನೇಹಿತನ ಜೊತೆ ಹೊಟೇಲ್ ಗೆ ಹೋಗಿದ್ದಾರೆ. ಆದ್ರೆ ತಿಂಡಿ ಬರುವಷ್ಟರಲ್ಲೆ ಹೃದಯಾಘಾತವಾಗಿದೆ. ಮಾತಾಡುತ್ತ ಕುಳಿತಾಗ ಆ ಘಟನೆ ನಡೆದಿದೆ. ಹೋಟೆಲ್ ನಲ್ಲಿದ್ದವರು ಹಾಗೂ ಸ್ನೇಹಿತರ ಸಹಾಯ ಪಡೆದು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದ್ರೆ ನಿತಿನ್ ಬದುಕುಳಿದಿಲ್ಲ.