ಬೆಂಗಳೂರು: ಕಾಂಗ್ರೆಸ್ ನಲ್ಲಿ ಈಗಾಗಲೇ ಸಿಎಂ ಸ್ಥಾನಕ್ಕಾಗಿ ಮನಸ್ತಾಪಗಳು ಎದ್ದಿವೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದು, ಡಿಕೆ ಶಿವಕುಮಾರ್ ಅವರು ವೈಟಿಂಗ್ ನಲ್ಲಿದ್ದಾರೆ. ಅದರ ನಡುವೆ ದಲಿತ ಸಿಎಂ ಸೇರಿದಂತೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇದೀಗ ಸಚಿವ ಸತೀಶ್ ಜಾರಕಿಹೊಳಿ ಕೂಡ ನಾನು ಸಿಎಂ ಆಕಾಂಕ್ಷಿ. ಆದರೆ ಈಗಲ್ಲ ಎಂದಿದ್ದಾರೆ.
ಸದ್ಯಕ್ಕೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ನವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಬೇರೆಯವರು ಹೇಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಪರಿಸ್ಥಿತಿ ಉದ್ಭವಿಸಿಲ್ಲ. ಹೈಕಮಾಂಡ್ ತೀರ್ಮಾನವೇ ನನ್ನ ತೀರ್ಮಾನ. ಸದ್ಯಕ್ಕೆ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. 2028ಕ್ಕೆ ಡಿಮ್ಯಾಂಡ್ ಇಡುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಹುದ್ದೆಯನ್ನು ಬೇರೆಯವರು ಕೇಳುವುದು ಅವರವರ ಇಷ್ಟ. ಅನಾರೋಗ್ಯದ ಕಾರಣ ನಾನು ಮುಖ್ಯಮಂತ್ರಿ ಉಪಹಾರ ಕೂಟಕ್ಕೆ ಗೈರಾಗಿದ್ದೆ. ಸಭೆಗೆ ಗೈರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಗಮನಕ್ಕೂ ತಂದಿದ್ದೇನೆ. ಮೀಟಿಂಗ್ ಹೋಗದೆ ಇದ್ದ ಕಾರಣ, ಬೇರೆ ಅರ್ಥ ಕಲ್ಪಿಸುವುದು ಬೇಡ. ಸಿಎಂ ಆಗುವ ಆಸೆ ನನಗೂ ಇದೆ. ಆ ಸಂಬಂಧ 2028ಕ್ಕೆ ಬೇಡಿಕೆ ಇಡುತ್ತೇನೆ ಎಂದಿದ್ದಾರೆ.