in

ಸಂಸ್ಕಾರ ಮತ್ತು ಮೌಲ್ಯಯುತ ಗುಣಗಳನ್ನು ಮಕ್ಕಳಿಗೆ ಕಲಿಸಬೇಕು :  ಜಿ.ಎಸ್. ಅನಿತ್ ಕುಮಾರ್

suddione whatsapp group join

ಚಿತ್ರದುರ್ಗ, (ಮಾ.06) :  ಬಾಲ್ಯದಲ್ಲಿಯೇ ಮಕ್ಕಳಿಗೆ ಭಾರತದ ಸಂಸ್ಕೃತಿ ಪರಿಚಯ ಮಾಡಿಸಿಕೊಡಬೇಕಾದದ್ದು ಪೋಷಕರ ಆಧ್ಯ ಕರ್ತವ್ಯ’’ ಜಿ.ಎಸ್. ಅನಿತ್ ಕುಮಾರ್

ತಾಲ್ಲೂಕಿನ ಭೀಮಸಮುದ್ರದ
ಶ್ರೀ ಭೀಮೇಶ್ವರ ಬಾಲ ವಿಕಾಸ ಶಾಲೆಯಲ್ಲಿ ಮಕ್ಕಳಿಂದ ತಂದೆ ತಾಯಿಯ ಪಾದಪೂಜಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಸಂಸ್ಕಾರ, ಮೌಲ್ಯಯುತ ಗುಣಗಳನ್ನು ಬೆಳೆಸಬೇಕೆಂದು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಯನ್ನಾಗಿ ಮಾಡಬೇಕೆಂದರು.

ಭಾರತವು ಪ್ರಪಂಚದ ಮುನ್ನುಡಿ ದೇಶವಾಗಬೇಕಾದರೆ ಭಾರತದ ಸಂಸ್ಕೃತಿ ಸಾರವನ್ನು ಮಕ್ಕಳಿಗೆ ತಿಳಿಹೇಳಬೇಕೆಂದು ಆ ದಿಸೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಶ್ರಮವಹಿಸಬೇಕೆಂದೂ ತಿಳಿಸಿದರು.

ಪ್ರಪಂಚದ ಹಲವಾರು ದೇಶದವರು ಭಾರತದ ಸಂಸ್ಕೃತಿಗೆ ಮಾರು ಹೋಗಿ ಅವರೂ ಸಹ ತಮ್ಮ ದೇಶದಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಿದ್ದು, ನಾವುಗಳು ಅದನ್ನು ಮುಂದಿನ ಪೀಳಿಗೆಗೆ ಪೂಜೆ, ಗುರುಹಿರಿಯರಲ್ಲಿ ಭಕ್ತಿ ಮುಂತಾದ ಸದ್ಗುಣಗಳನ್ನು ಬೆಳೆಸಬೇಕೆಂದು ತಿಳಿಸಿದರು.

ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ:  ವೇದಬ್ರಹ್ಮ ಶ್ರೀ ಶಿವಬಸವ ಸ್ವಾಮಿಯವರು ಮಾತನಾಡುತ್ತಾ ಮಕ್ಕಳಿಗೆ ಗುರುಹಿರಿಯರಲ್ಲಿ ಭಕ್ತಿ ಭಾವ ಬರಬೇಕೆಂದರೆ ಇಂತಹ ಕಾರ್ಯಕ್ರಮಗಳು ಪ್ರತಿ ಶಾಲೆಯಲ್ಲಿ ನಡೆಸಬೇಕೆಂದು ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯುವುದೆಂದು ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕರಾದ ಶ್ರಿ ಬಿ.ಕೆ. ಕಲ್ಲಪ್ಪ ಮಾತನಾಡಿ, ಈಗ ಪರೀಕ್ಷಾ ಸಮಯವಾಗಿದ್ದು, ಪೋಷಕರು ತಾವುಗಳು ಟಿ.ವಿ.ಯನ್ನು ಮತ್ತು ಮೊಬೈಲ್ ಗಳನ್ನು ದೂರ ಇರಿಸಿ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಮಕ್ಕಳಲ್ಲಿ ಸೂಪ್ತ ಪ್ರತಿಭೆಗಳು ಇದ್ದು, ಅದನ್ನು ಹೊರತೆಗೆಯುವ ಕಾರ್ಯವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ  ಸಂಸ್ಥೆಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಶ್ರೇಷ್ಟಿ ಯವರು
ಮಕ್ಕಳ ಬಾಲ್ಯದಲ್ಲಿ ಭಾರತದ ಉಜ್ವಲ ಸಂಸ್ಕೃತಿಯನ್ನು ರೂಡಿಸಬೇಕೆಂದು ಪ್ರತಿನಿತ್ಯವು ಸಹ ಮಕ್ಕಳಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವ ಮೂಲಕ ಅದರಲ್ಲಿ ಬರುವಂತಹ ಗುರುಹಿರಿಯರಿಗೆ ಗೌರವ ಕೊಡುವ ಗುಣವನ್ನು ಅದರಲ್ಲಿಯೂ ಶ್ರವಣಕುಮಾರನ ಕಥೆಯನ್ನು ತಿಳಿಸುತ್ತಾ  ಅದರಲ್ಲಿ ಅವರು ತಮ್ಮ ಮಾತಾ ಪಿತೃಗಳಿಗೆ ಏನೆಲ್ಲ ಕಾರ್ಯವನ್ನು ಮಾಡಿದರು ಎಂದು ತಿಳಿಸಿದರು.

ಇಂತಹ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿದರೆ ಮಕ್ಕಳು ಮುಂದೆ ತಂದೆ ತಾಯಿಗಳನ್ನು ಉತ್ತಮ ರೀತಿಯಲ್ಲಿ ಸಾಕುವರು ಎಂದರು.

ಕಾರ್ಯಕ್ರಮದ ಸ್ವಾಗತವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್. ಮಂಜಣ್ಣ ನೆರೆವೇರಿಸಿದರು. ವಂದನಾರ್ಪಣೆಯನ್ನು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ  ಎಮ್. ಎನ್. ರಾಮು ನೆರೆವೇರಿಸಿದರು.

ವೇದಿಕೆಯ ಮೇಲೆ ಮುಖ್ಯ ಶಿಕ್ಷಕರಾದ ಹೆಚ್.ನಾಗರಾಜ್, ಭರತ್ ಉಪಸ್ಥಿತರಿದ್ದರು. ಶಿಕ್ಷಕ/ಶಿಕ್ಷಕಿಯರು ಮಕ್ಕಳ ತಂದೆ / ತಾಯಿಗಳು ಹಾಗೂ  ಪೋಷಕ ವರ್ಗದವರು  ಪಾಲ್ಗೋಂಡಿದ್ದರು.

ಇದೇ ಸಂದರ್ಬದಲ್ಲಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಟಿ.ಜಿ. ದೇವಕುಮಾರ್ ರವರು 35 ವರ್ಷದಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಅವರಹುಟ್ಟುಹಬ್ಬವನ್ನು ಮಕ್ಕಳು ಹಾಗೂ ಶಿಕ್ಷಕ ವೃಂದ ಹಾಗೂ ಕುಟುಂಬವರ್ಗದವರು ಆಚರಿಸಿದರು.

ಇದೇ ಸಂದರ್ಭದಲ್ಲಿ ಪೋಷಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಗೆದ್ದಂತಹ ಪೋಷಕರಿಗೆ ಬಹುಮಾನ ವಿತರಿಸಲಾಯಿತು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಮಾರ್ಚ್ 9 ರಿಂದ 29 ವರೆಗೆ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆ : ಕಟ್ಟುನಿಟ್ಟಾಗಿ ಪರೀಕ್ಷಾ ಕಾರ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜೆ

ಪಿಂಚಣಿ, ಬೆಳೆ ಪರಿಹಾರ ಹಣವನ್ನು ಬ್ಯಾಂಕ್‍ಗಳು ಸಾಲಕ್ಕೆ ಕಡಿತ ಮಾಡಿಕೊಳ್ಳುವಂತಿಲ್ಲ : ಸಚಿವ ಬಿ.ಸಿ.ಪಾಟೀಲ್ ಸೂಚನೆ