ಬೆಂಗಳೂರು: ಬಿಜೆಪಿಯವರು ಬೆಂಬಲ ನೀಡಲಿಲ್ಲ ಅಂತ ನನ್ನನ್ನ ಜೈಲಿಗೆ ಕಳುಹಿಸಿದ್ರು ಅಂತ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ರು. ಅದು ಸಚಿವ ಈಶ್ವರಪ್ಪ ಅವರ ಮಾತಿಗೆ ತಿರುಗೇಟು ನೀಡಿದ್ರು. ಇದೀಗ ಡಿಕೆಶಿ ಅವರ ಮಾತಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇರೆಯದ್ದೇ ದಾಟಿಯಲ್ಲಿ ಉತ್ತರಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರಿಗೆ ಕೇಸ್ ನಿಂದ ಬಚಾವ್ ಆಗಬಹುದು ಅಂತ ಗೊತ್ತಿದ್ರೆ ಈ ಮೊದಲೇ ಬಂದು ಬಿಜೆಪಿ ಸೇರುತ್ತಿದ್ದರು. ಆದ್ರೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧವನ್ನ ಮರೆಮಾಚಲು ಬಿಜೆಪಿ ಬಗ್ಗೆ ಈ ರೀತಿ ಹೇಳಿಕೆಗಳನ್ನ ನೀಡ್ತಿದ್ದಾರೆ ಎಂದಿದ್ದಾರೆ.
ಅಕ್ರಮ ಆಸ್ತಿ ಮಾಡಿಕೊಂಡಿರುವ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ. ಡಿಕೆಶಿ ಜೈಲಿಗೆ ಹೋಗಿದ್ದು ಬಿಜೆಪಿ ಪಕ್ಷಕ್ಕೆ ಬಂದಿಲ್ಲ ಅಂತ ಅಲ್ಲ. ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಅವರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ಹೀಗಾಗಿ ಎಫ್ಐಆರ್ ದಾಖಲಾಗಿದ್ದ ಕಾರಣದಿಂದ ಅವರು ಜೈಲಿಗೆ ಹೋಗಿದ್ದು. ಒಂದು ವೇಳೆ ಬಿಜೆಪಿ ಸೇರಿದ್ರೆ ಕೇಸ್ ನಿಂದ ಮುಕ್ತಿ ಸಿಗುತ್ತೆ ಅಂತ ಗೊತ್ತಿದ್ರೆ ಮೊದಲೇ ಬರ್ತಾ ಇದ್ರು ಎಂದಿದ್ದಾತೆ.