ಕುವೆಂಪು ಅವರ ರಾಮಾಯಣ ದರ್ಶನಂ ಬಿಟ್ಟು, ಪೆರಿಯಾರ್ ಪಠ್ಯ ನೀಡಲು ಹೊರಟಿದ್ರು : ಸಿ.ಟಿ ರವಿ

1 Min Read

 

ಬೆಂಗಳೂರು: ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಇಂದು ಬೃಹತ್ ಹೋರಾಟ ನಡೆಯುತ್ತಿದೆ. ವಿರೋಧದ ಬಗ್ಗೆ ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿದ್ದು, ಹೋರಾಟ ಮಾಡುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ನೀವು ಯಾವ ವಿಚಾರವಾಗಿ ಹೋರಾಟ ಮಾಡ್ತಿದ್ದೀರಿ. ಕುವೆಂಪು ಅವರ ರಾಮಾಯಣ ದರ್ಶನಮ್ ಬಿಟ್ಟು, ಪೆರಿಯಾರ್ ಪಠ್ಯ ನೀಡಲು ಹೊರಟಿದ್ರು.

ಕುವೆಂಪು ಅವರು ರಾಮನನ್ನ ಹೀರೋ ಮಾಡಿದ್ರು, ಪೆರೆಯಾರ್ ರಾವಣನನ್ನು ಹೀರೋ ಮಾಡಲು ಹೊರಟಿದ್ರು. ಕುವೆಂಪು ಅವರ ಪಾಠವನ್ನೇ ಕೈಬಿಡಲು ಹೊರಟಿದ್ರು. ನಾವು ರಾವಣನನ್ನ ಹೀರೋ ಮಾಡಿರೋ ಪಠ್ಯ ಓದಬೇಕಾ.?. ಕುವೆಂಪು ಅವರ ಪಠ್ಯಕ್ಕೆ ಹೆಚ್ಚುವರಿಯಾಗಿ ಎರಡು ಪಠ್ಯ ಸೇರಿಸಲಾಗಿದೆ. ಎರಡು ಪ್ಯಾರಾ ಹೆಚ್ಚುವರಿ ಸೇರಿಸಿರೋದು ತಪ್ಪಾ.?

ನಾರಾಯಣ ಗುರು ಅವರ ಪಠ್ಯ ಕೈಬಿಟ್ಟಿಲ್ಲ, ಬಸವಣ್ಣನವರ ಪಾಠ ಇದೆ. ಸಿಎಂ ಮತ್ತೊಂದು ಆಪ್ಷನ್ ಕೊಟ್ಟಿದ್ದಾರೆ. ಮುಡಂಬಡಿತ್ತಾಯ, ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್ ಚಕ್ರತೀರ್ಥ ಅವರ ಮೂರು ಪಾಠವನ್ನು ಪಬ್ಲಿಕ್ ಡೊಮೈನ್‌ಗೆ ಬಿಟ್ಟಿದ್ದಾರೆ. ಜನರು ಓದಿ ಯಾವುದು ಬೇಕು ಅಂತ ತೀರ್ಮಾನ ಮಾಡಲಿ. ಪಠ್ಯ ಬದಲಿಸಿ ಅಂದ್ರೆ ಬದಲಿಸಲು ಸಿದ್ದ ಅಂತ ತಿಳಿಸಿದ್ದೇವೆ. ದೇವೇಗೌಡರು, ಡಿ.ಕೆ ಶಿವಕುಮಾರ್ ಎಲ್ಲರೂ ಪೂಜೆ ಮಾಡೋದು ರಾಮನ್ನೇ. ರಾವಣನನ್ನ ಹೀರೋ ಮಾಡಲು ಹೊರಟ್ರೆ ನಾವು ಏನು ಮಾಡೋದು. ಅದನ್ನ ಅಲ್ಲಿ ಹೋರಾಟ ಮಾಡ್ತಿರೋರಿಗೆ ಮನವರಿಕೆ ಮಾಡಬೇಕಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *