ಬೆಂಗಳೂರು: ಬಿಜೆಪಿ ನಾಯಕ ಸಿ ಟಿ ರವಿ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ. 350 ಸ್ಥಾನದಲ್ಲಿ ಸಿಕ್ಕಿರೋದೆ ಒಂದ್ ಸಾವಿರ ಒಂದೂವರೆ ಸಾವಿರ ಕಡಿಮೆ. ನಾಮಿನೇಷನ್ ಹೊಸದಾಗಿ ಫೈಲ್ ಮಾಡಿ ಬಂದವರಿಗೆ ಒಂದಷ್ಟು ವೋಟು ಸಿಗುತ್ತೆ. ಆದ್ರೆ ಕಾಂಗ್ರೆಸ್ ಗೆ ಅದು ಇಲ್ಲ. ಈಗ ಜನರಿಗೆ ಹಸ್ತ ಕಂಡರೆ ಕಣ್ಣೆತ್ತಿ ನೋಡಬಾರದು ಎಂಬುದೇ ಬಂದಿದೆ. ಇಷ್ಟಾದರೂ ಹಳೇ ಗಂಡನ ಪಾದವೇ ಗತಿ ಎಂಬಂತಾಗಿದ್ದಾರೆ.

ಆಟಗಾರನಿಗೆ ಫರ್ಫಾಮೆನ್ಸ್ ಮುಖ್ಯ. ಕಾಂಗ್ರೆಸ್ ನವರಿಗೆ ಫರ್ಫಾಮೆನ್ಸ್ ಬೇಡವೇ ಬೇಡ. ಕಾಂಗ್ರೆಸ್ ನವರಿಗೆ ಸೋಲಿನ ಮೇಲೆ ಸೋಲು, ಅಪಮಾನವಾಗಿದೆ. ಆದರೆ ಏನೇ ಆದ್ರೂ ಸೋನಿಯಾ ಗಾಂಧಿಯೇ ಬೇಕು ಅಂತಿದ್ದಾರೆ. ನಮ್ಗೆ ಒಳ್ಳೆಯದ್ದೆ. ನಮ್ಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗುತ್ತದೆ.

ರಾಹುಲ್ ಗಾಂಧಿ ನೇತೃತ್ವ ಇದ್ರೆ ಟ್ರೋಲ್ ಮಾಡ್ತಾರೆ. ಅದು ನಮ್ಗೆ ಒಳ್ಳೆಯದ್ದು. ಹೀಗಾಗಿ ನಮ್ಮ ಕ್ಯಾಂಪೇನ್ ಸುಲಭವಾಗುತ್ತೆ. ಅವರನ್ನ ಸೋಷಿಯಲ್ ಮೀಡಿಯಾದವ್ರೆಲ್ಲಾ ಟ್ರೋಲ್ ಮಾಡ್ತಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಸಿ ಟಿ ರವಿ ಹರಿಹಾಯ್ದಿದ್ದಾರೆ.

