ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ. ಈಗಿರುವಾಗ್ಲೇ ಪಕ್ಷಗಳು ಅಲರ್ಟ್ ಆಗಿವೆ. ಈ ವಿಚಾರವಾಗಿ ಬಿಜೆಪಿ ನಾಯಕ ಸಿ ಟಿ ರವಿ ಮಾತನಾಡಿದ್ದು, ತಮ್ಮ ಪಕ್ಷದಲ್ಲಿರುವವರ ಬಗ್ಗೆಯೇ ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ಹೋಗೋದಕ್ಕೆ ಒಂದು ವರ್ಷ ಇದೆ. ಈ ಮಧ್ಯೆ ಮೂರು ವರ್ಷದ ಆಡಳಿತದ ಬಗ್ಗೆಯೂ ಅವಲೋಕನ ಮಾಡಬೇಕು. ಯಾರು ಖಾತೆಗೂ ನ್ಯಾಯ ಕೊಟ್ಟು, ಜನಸ್ನೇಹಿಯಾಗಿ ಪಕ್ಷಕ್ಕೂ ಬಲಕೊಟ್ಟಿರುವವರಿಗೆ ಹೆಚ್ಚಿನ ಬೆಂಬಲ ನೀಡಬೇಕು. ಯಾರು ಖಾತೆಗೂ ನ್ಯಾಯ ಕೊಡದೆ ಹೋಗಿದ್ದಾರೆ, ಪಕ್ಷಕ್ಕೆ ಬಲ ತುಂಬದೆ ಇರುವವರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ. ಈ ಬಗ್ಗೆ ಸಿಎಂ ಯೋಚನೆ ಮಾಡಬೇಕು. ಆಗ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲೋದಕ್ಕೆ ಸಾಧ್ಯ ಎಂದಿದ್ದಾರೆ.
ವಿಜಯೇಂದ್ರ ಅವರ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ಸಿ ಟಿ ರವಿ, ರಾಜ್ಯಘಟಕದ ಉಪಾಧ್ಯಕ್ಷರಾಗೋದು ಸುಲಭ ಅಲ್ಲ. ಅದು ದೊಡ್ಡ ಹುದ್ದೆ. ಉಪಾಧ್ಯಕ್ಷ ಹುದ್ದೆ ಪಡೆಯೋದು ಎಷ್ಟು ಜನರ ಪುಣ್ಯವೋ ಗೊತ್ತಿಲ್ಲ. ಉಪಾಧ್ಯಕ್ಷರ ಹುದ್ದೆ ಸಿಗೋದು ಸಣ್ಣ ಸಂಗತಿಯಲ್ಲ ಎಂದಿದ್ದಾರೆ.