ನೆಲಮಂಗಲ: ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಸಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ಇಂದಿನಿಂದ ಸುಪ್ರಭಾತ ಶುರು ಮಾಡಿಕೊಂಡಿದೆ. ಈ ಸಂಬಂಧ ಮಾತನಾಡಿದ ಸಿ ಟಿ ರವಿ, ಕೋರ್ಟ್ ತೀರ್ಪು ಜಾರಿ ಮಾಡಬೇಕಾ ಬೇಡವಾ..? ಮಾಡಬಾರದು ಎಂದರೆ ನೀವೂ ಸಂವಿಧಾನ ವಿರೋಧಿಯಾ ಎಂದು ಪ್ರಶ್ನಿಸಿದ್ದಾರೆ.
ಬರೆದಿಟ್ಟುಕೊಳ್ಳಲಿ ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಇರುವ ರಾಜ್ಯಗಳಲ್ಲೂ ಅಧಿಕಾರ ಕಳೆದುಕೊಳ್ಳುತ್ತೆ. ಈ ರೀತಿಯ ನಡವಳಿಕೆಯಿಂದಾಗಿ. ಕಾನೂನು ಸುವ್ಯವಸ್ಥೆಯ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಈಗ ಬಂದಿರುವ ಪ್ರಶ್ನೆ ಕಾಂಗ್ರೆಸ್ ನಿಲುವೇನು. ನ್ಯಾಯಲಯದ ತೀರ್ಪನ್ನು ಅನುಷ್ಠಾನಗೊಳಿಸಬೇಕಾ ಬೇಡವಾ..? ಪರ್ಮಿಷನ್ ಯಾರು ತೆಗೆದುಕೊಂಡಿದ್ದಾರೆ. ಯಾರು ಪೊಲೂಷನ್ ಕಂಟ್ರೋಲ್ ಬೋರ್ಡ್ ನಿಯಮ ಮೀರಿ, ಅನುಮತಿ ಇಲ್ಲದೆ ಮೈಕ್ ಹಾಕುತ್ತಾರೆ, ಅವರು ಹಿಂದೂ ಇರಲಿ, ಮುಸ್ಲಿಂ ಇರಲಿ ಅದನ್ನು ಖಂಡಿಸುತ್ತೇವೆ. ಇದು ನಮ್ಮ ನಿಲುವು.
ನಾವು ಹೇಳುವುದು ಏನು ಅಂದ್ರೆ ಸುಪ್ರೀಂ ಕೋರ್ಟ್ ತೀರ್ಪು ಯಥಾವತ್ತಾಗಿ ಅನುಷ್ಠಾನಗೊಳಿಸಿ. ಕೋರ್ಟ್ ತೀರ್ಪಿನ ಬಗ್ಗೆ ಸಹಮತವಿಲ್ಲದೆ ಹೋದರೆ ಮೇಲ್ಮನವಿ ಸಲ್ಲಿಸಲಿ. ಈ ತೀರ್ಪು ನಮಗೆ ಬಾಧಕವಾಗುತ್ತೆ, ಪುನರ್ ಪರಿಶೀಲನೆ ಮಾಡಿ ಅಂತ ಅಪೀಲು ಹಾಕಿ. ಎಲ್ಲಿಯವರೆಗೂ ಅಪೀಲು ಹಾಕಲ್ಲವೋ ಅಲ್ಲಿಯವರೆಗೂ ನ್ಯಾಯಾಲಯದ ತೀರ್ಪನ್ನು ಗೌರವಿಸಲೇಬೇಕು ಎಂದು ಸಿಟಿ ರವಿ ಹೇಳಿದ್ದಾರೆ.