ಬೆಂ.ಗ್ರಾಮಾಂತರ: ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿ, ಈ ದೇಶದಲ್ಲಿ ಬಾಲ ಬಿಚ್ಚಿದರೆ ಬುಲ್ಡೋಜರ್ ಗಳು ನುಗ್ಗುತ್ತವೆ ಎಂದು ಹೇಳಿಕೆ ನೀಡಿದ್ದಾರೆ.
ಕುಂಕುಮ ಇಟ್ಟವರು ಯಾರು ಬಾಂಬ್ ಹಾಕಿಲ್ಲ. ಟೋಪಿ ಹಾಕಿದವರೇ ಬಾಂಬ್ ಹಾಕಿದವರು. ಭಯೋತ್ಪಾದಕರಿಗೆ ಬಿರಿಯಾನಿ ತಿನಿಸೋ ಕಾಲ ಇತ್ತು. ಈಗಲೂ ಹಾಗೆ ಇರಬೇಕಾ..? ಈಗ ಬಾಲ ಬಿಚ್ಚಿದರೆ ಬಿರಿಯಾನಿ ಅಲ್ಲ ಬುಲ್ಡೋಜರ್ ನುಗ್ಗುತ್ತೆ. ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನ್ನಿಸಲ್ಲ. ಹಾಗೇ ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಕುಂಕುಮ ಇಡುವವರನ್ನು ಕಂಡರೆ ಭಯವಾಗುತ್ತಂತೆ. ನಮ್ಮ ತಾಯಂಂದಿರು ಕುಂಕುಮ ಇಡುತ್ತಾರೆ ಅಲ್ವಾ..? ನಾನು ಹಿಂದೂ ಅಂತ ಹೇಳುತ್ತಾರೆ. ಆದರೆ ಕೇಸರಿ ಟೋಪಿ ಮಾತ್ರ ಬೇಡ ಅಂತಾರೆ. ಕೇಸರಿ ಟೋಪಿ ಹಾಕಲು ಹೋದಾಗ ಏನು ಮಾಡಿದರು..? ಕಿತ್ತಾಕಿದರು. ಕೇಸರಿ ಟೋಪಿ ಹಾಕಿದವರ್ಯಾರು ಬಾಂಬ್ ಹಾಕಲಿಲ್ಲ. ಕೇಸರಿ ಶಾಲು ಹಾಕಿದವರು ಭಾರತ್ ಮಾತಾಕಿ ಜೈ ಎಂದರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.






GIPHY App Key not set. Please check settings