ಹೊಸಪೇಟೆ: ಈಶ್ವರಪ್ಪ ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈಶ್ವರಪ್ಪ ಅವರನ್ನು ಈ ಕೇಸ್ ನಲ್ಲಿ ಬಂಧಿಸಲೆ ಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರತಿಭಟನೆ ಮಾಡಲು ಕಾಂಗ್ರೆಸ್ ನವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ದೂರಿದ್ದಾರೆ.
ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನವರು ಇನ್ನು ಒ್ರತಿಭಟನೆ ನಡೆಸುತ್ತಲೆ ಇದ್ದಾರೆ. ಅವರಿಗೆ ಆತ್ಮವಂಚನೆ ಮಾಡಿಕೊಂಡು ಹೋರಾಟ ಮಾಡುವುದು ಬೇಡ. ಈಶ್ವರಪ್ಪ ಅವರು, ನಿಷ್ಪಕ್ಷಪಾತ ತನಿಖೆಯಾಗಲಿ ಅಂತ ರಾಜೀನಾಮೆ ಕೊಟ್ಟಿದ್ದಾರೆ.
ಡಿಕೆ ಪ್ರಾಮಾಣಿಕ ವ್ಯಕ್ತಿ ಅಣ್ಣಾ ಹಜಾರೆಯಂಥವರು. ಡಿಕೆಶಿಯಂಥಾ ಪ್ರಾಮಾಣಿಕ ವ್ಯಕ್ತಿ ಸಿಗುತ್ತಾರಾ ಹೇಳಿ. ಯಾವ ಭ್ರಷ್ಟಾಚಾರದಲ್ಲೂ ಅವರ ಹೆಸರಿಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ ಬರುವುದಕ್ಕೂ ಡಿಕೆಶಿ ಬಾಯಲ್ಲಿ ಭ್ರಷ್ಟಾಚಾರದ ಮಾತು ಬರುವುದಕ್ಕೂ ವ್ಯತ್ಯಾಸ ಇದೆಯಾ. ಇನ್ನು ಸಂತೋಷ್ ಕೇಸ್ ವಿಚಾರಣೆ ನಡೆಯುತ್ತಿದೆ. ವಾಟ್ಸಪ್ ಮೆಸೇಜ್ ಸತ್ತ ಮೇಲೆ ಕಳುಹಿಸದ್ದ, ಬದುಕಿದ್ದಾಗ ಕಳುಹಿಸಿದ್ದ ಎಂಬುದು ಎಲ್ಲವು ತನಿಕೆಯಾಗಬೇಕು. ತನಿಖೆಯ ನಂತರ ಎಲ್ಲವೂ ಹೊರ ಬರಬೇಕು. ಸಾವಿನ ಸುತ್ತ ಅನುಮಾನದ ಹುತ್ತ ಇದೆ. ಯಾರ ಹಿನ್ನೆಲೆ ಇದೆ, ಸಾವೋ, ಆತ್ಮಹತ್ಯೆಯೋ ಮತ್ತೊಂದೋ ತನಿಖೆಯ ನಂತರ ಗೊತ್ತಾಗುತ್ತೆ. ವಾಟ್ಸ್ ಅಪ್ ಮೆಸೇಜ್ ಬಗ್ಗೆಯೂ ಗೊತ್ತಾಗಬೇಕು. ಸಾವಿನ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೆ, ಬರೆದಿಟ್ಟು ಸಹಿ ಹಾಕೋನು. ಇದೆಲ್ಲಾ ನೋಡಿದ್ರೆ ಅನುಮಾನ ಮೂಡುತ್ತೆ ಎಂದಿದ್ದಾರೆ.