ವಿಜಯನಗರ: ಇಂದು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಈ ಸಭೆಯ ವೇಳೆ ಹುಬ್ಬಳ್ಳಿ ಘಟನೆ ಬಗ್ಗೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಹೋಟಿಗಾಗಿ ಜೊಲ್ಲಿ ಸುರಿಸುವವರು ಇದಕ್ಕೂ ಹಲಾಲ್ ಸರ್ಟಿಫಿಕೇಟ್ ಕೊಡುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ರಾಮನವಮಿ ಮೆರವಣಿಗೆ ವೇಳೆ ಜಾರ್ಖಂಡ್, ಗುಜರಾತ್, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಗಲಭೆ ಎಬ್ಬಿಸಿ, ಕಲ್ಲು ತೂರಾಟ ನಡೆಸಿದ್ದವರೆ, ಇಲ್ಲಿಯೂ ಪೂರ್ವ ನಿಯೋಜಿತವಾಗಿ ಗಲಭೆ ಎಬ್ಬಿಸಿರುವ ಬಗ್ಗೆ ಪೊಲೀಸರು ವರದಿ ನೀಡಿದ್ದಾರೆ. ಇವರು ಸಣ್ಣ ಸಣ್ಣ ಸಂಗತಿಗಳಿಗೆ ಯಾಕೆ ಕೆರಳುತ್ತಾರೆ ಎಂದಿದ್ದಾರೆ.
ಇನ್ನು ವಿವಾದಾತ್ಮಕ ಸ್ಟೇಟಸ್ ಹಾಕಿದ್ದರೆ ಅವನ ವಿರುದ್ಧ ದೂರು ನೀಡಲಿ. ಕಾನೂನು ಇದೆ. ಇವರು ಯಾಕೆ ಕಾನೂನು ಕೈಗೆತ್ತಿಕೊಳ್ಳುವುದು. ಜಾತ್ಯಾತೀತತೆ ಎನ್ನುವವರು ಹೀಗ್ಯಾಕೆ ಬಾತಿ ಮುಚ್ಚಿಕೊಂಡು ಕುಳಿತಿದ್ದಾರೆ. ಏಳನೇ ಶತಮಾನದಿಂದಲೂ ಇಂತಹ ಘಟನೆಗಳು ನಡೆಯುತ್ತಲೆ ಬಂದಿದೆ. ಒಂರು ಕೋಮು ವ್ಯವಸ್ಥಿತ ರೀತಿಯಲ್ಲಿ ಸಂಚು ರೂಪಿಸುತ್ತಿದೆ. ದೇಶದಲ್ಲಿ ಹರಾಜಕತೆ ಉಂಟು ಮಾಡುತ್ತಿದೆ, ದಂಗೆ ಎಬ್ಬಿಸಿ ಜನರನ್ನು ಭಯಗೊಳಿಸುತ್ತಿದೆ. ಆಮೇಲೆ ಸಂವಿಧಾನವೇ ಬೇಕು ನಮಗೆ ಅಂತ ಓಡಿ ಬರ್ತಾರೆ. ಅವರಿಗೆ ಏನು ಅನ್ನಬೇಕು ಎಂದಿದ್ದಾರೆ.