ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರು ವಿಚಾರಣೆಗೆ ಹಾಜರಾಗುವ ಮುನ್ನ ಬೃಹತ್ ಪಾದಯಾತ್ರೆ ಮೂಲಕ ಇಡಿ ಕಚೇರಿಗೆ ಧಾವಿಸಿದರು. ದೆಹಲಿ ಮತ್ತು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ಬೆನ್ನಲ್ಲೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸುದ್ದಿಗೋಷ್ಟಿ ನಡೆಸಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನವರು ಸಂವಿಧಾನಕ್ಕಿಂತ ಮೇಲಿನವರಾ..? ತಲೆಯಿಂದ ಕಾಲಿನವರೆಗೂ ಕಾಂಗ್ರೆಸ್ ಪಾರ್ಟಿ ಹಗರಣ ಹೊದ್ದುಕೊಂಡಿದೆ. ಕಾಂಗ್ರೆಸ್ ನವರಿಗೇಕೆ ಭಯ. ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಮಾಡದ ಹಗರಣವಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ಸಾವರ್ಕರ್ ಧೂಳಿಗೂ ರಾಹುಲ್ ಗಾಂಧಿ ಸಮವಿಲ್ಲ. ಅಂಡಮಾನ್ ಜೈಲು ನೋಡಿದರೆ ರಾಹುಲ್ ಗಾಂಧಿ ಪ್ಯಾಂಟು ಒದ್ದೆಯಾಗುತ್ತದೆ. ಈ ಜನ್ಮ ಅಲ್ಲ, ಯಾವ ಜನ್ಮದಲ್ಲೂ ರಾಹುಲ್ ಗಾಂಧಿ ಸಾವರ್ಕರ್ ಆಗುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಈ ಸಂಬಂಧ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.