ಬೆಂಗಳೂರು: ಇನ್ಮುಂದೆ ಹಲಾಲ್ ಮಾಂಸವನ್ನ ಖರೀದಿಸಬಾರದು ಎಂದು ಎಲ್ಲೆಡೆ ಹಿಂದೂ ಸಂಘಟನೆಗಳು ಬ್ಯಾನ್ ಮಾಡಿದ್ದಾರೆ. ಈ ಸಂಬಂಧ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಹಲಾಲ್ ಅಂದ್ರೆ ಏನ್ರೀ..? ಪಾಕಿಸ್ತಾನದಲ್ಲಿ ಹಲಾಲ್ ಅಂತ ಇಟ್ಟರೆ ಸರಿ. ಇಲ್ಲಿ ಸಂವಿಧಾನ ಇರ್ಬೇಕಾ ಶರಿಯತ್ ಇರ್ಬೇಕಾ..? ಸಿಂಪಲ್ ವಿಚಾರವನ್ನ ಮುಂದೆ ಇಟ್ಟೀದ್ದೀನಿ. ಹಲಾಲ್ ಗೆ ಮತೀಯ ವಿಷಯ ಇದೆಯೋ ಇಲ್ವೋ ಎಂದು ಪತ್ರಕರ್ತರನ್ನೇ ಕೇಳಿದ್ದಾರೆ. ಪತ್ರಕರ್ತರು ಇದಕ್ಕೆ ಮತೀಯ ಉದ್ದೇಶವಿಲ್ಲ ಇದ್ದರೆ ನೀವೇ ಪ್ರೂವ್ ಮಾಡಿ ಎಂದಾಗ ಸಿ ಟಿ ರವಿ ಇಲ್ಲ ಎಂದರೆ ಹಲಾಲ್ ಅಂತ ಯಾಕೆ ಹಾಕಬೇಕು ಎಂದಿದ್ದಾರೆ.
ಹಲಾಲ್ ಅಲ್ದೆ ಮಾಂಸವನ್ನ ಮುಸ್ಲಿಂರು ತೆಗೆದುಕೊಳ್ಳುತ್ತಾರಾ..? ಹಂಗೆ ಹಲಾಲ್ ಮಾಡದ ಮಾಂಸವನ್ನು ತೆಗೆದುಕೊಳ್ಳಬಾರದು ಅಂತ ಹೇಳುವುದರಲ್ಲಿ ತಪ್ಪಿಲ್ಲ. ತೆಗೆದುಕೊಳ್ಳಿ ಎಂದು ಅವರು ಹೇಳುವಾಗ ತೆಗೆದುಕೊಳ್ಳಬೇಡಿ ಅಂತ ಹೇಳೋ ಅಧಿಕಾರ ನಮಗೂ ಇದೆ. ಇಷ್ಟು ವರ್ಷ ಹಲಾಲ್ ಅನ್ನೋದು ಪ್ರಚೋದನೆ ಅಲ್ಲ ಅಂತ ಅನ್ನಿಸಿದ್ರೆ ಹಲಾಲ್ ಬೇಡ ಅನ್ನೋದು ಪ್ತಚೋದನೆ ಅಂತ ನೀವ್ಯಾಕೆ ಅಂದುಕೊಳ್ತೀರಿ. ತೆಗೆದುಕೊಳ್ಳುವವನಿಗೆ ತೆಗೆದುಕೊಳ್ಳಬೇಡಿ ಅನ್ನೋದು ತಪ್ಪಲ್ಲ. ಇದು ಸುದ್ದಿಗೋಷ್ಠಿ ವ್ಯಕ್ತಿಗತ ಚರ್ಚೆಯ ಸಂದರ್ಭವಲ್ಲ. ಮುಸಲ್ಮಾನರು ಬೇರೆಯವರ ಹತ್ತಿರ ಮಟನ್ ತೆಗೆದುಕೊಳ್ಳಬಾರದು. ತೆಗೆದುಕೊಂಡರೆ ಬಿಸಿನೆಸ್ ಅವರಿಗೆ ಹೋಗುತ್ತೆ ಅಂತ ಒಂದು ಡಿಸೈನ್ ಮಾಡಿದ್ದಾರೆ.
ಅಭಿವೃದ್ಧಿ ವಿಚಾರಕ್ಕೆ ಚರ್ಚೆ ಮಾಡೋದಾದ್ರೆ ನಮ್ಮ ಸರ್ಕಾರ ಮಾಡಿದ್ದಷ್ಟು ಅಭಿವೃದ್ಧಿಯನ್ನ ನಾವೇ ಹೆಚ್ಚು ಮಾಡಿದ್ದು. ಮೋದಿಯವರು ಸಬ್ ಕಾಸಾಥ್, ಸಬ್ ಕಾ ವಿಕಾಸ್ ಅಂತೇಳಿ ಎಲ್ಲರಿಗೂ ಕೊಟ್ಟ ಮೇಲೆ ಕೆಲವರು ಮೋದಿ ಬಿಜೆಪಿ ಅನ್ನೋ ಕಾರಣಕ್ಕೆ ಕೆಲವರು ವೋಟ್ ಹಾಕಲಿಲ್ಲ. ಏನು ಹೇಳಬೇಕು ಇದಕ್ಕೆ. ಮೋದಿ ತನ್ನ ಯೋಜನೆಗಳಲ್ಲಿ ಲೋಪ ಮಾಡಿಲ್ಲ. ಆದರೂ ಕೆಲವು ವರ್ಗ ಬಿಜೆಪಿಗೆ ಯಾಕೆ ವೋಟ್ ಹಾಕಿಲ್ಲ. ವೋಟ್ ಹಾಕದೆ ಇದ್ದವರಿಗೆ ಒಂದು ಕಾರಣವಿದೆ. ಆ ಕಾರಣ ಮತೀಯ ಕಾರಣವಾಗಿದ್ರೆ ಅದು ಸರೀನಾ ಎಂದು ಪ್ರಶ್ನಿಸಿದ್ದಾರೆ.