CSK ನಾಯಕನ ಸ್ಥಾನ ಬದಲಾವಣೆ : ಧೋನಿ ಸ್ಥಾನಕ್ಕೆ ಬಂದ್ರು ಋತುರಾಜ್ ಗಾಯಕ್ವಾಡ್

ಚೆನ್ನೈ: ಐಪಿಎಲ್ ಆಟಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ CSK ಫ್ಯಾನ್ಸ್ ಗೆ ಆಘಾತವಾದ ಸುದ್ದಿಯೊಂದು ಹೊರಬಿದ್ದಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಬದಲಾವಣೆಯಾಗಿದ್ದು, ಆ ಜಾಗಕ್ಕೆ ಋತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ. ಧೋನಿ ನಾಯಕತ್ವದಿಂದ ಇಳಿದ ಮಾಹಿತಿಯನ್ನು ಐಪಿಎಲ್ ಮೂಲಗಳು ಖಚಿತಪಡಿಸಿವೆ.

ಐಪಿಎಲ್ ನ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯಾಗಿದ್ದರು. ಐದು ಬಾರಿ ಚಾಂಪಿಯನ್ ಆಗಿದ್ದರು. ಇದೀಗ ದಿಢೀರನೇ ನಾಯಕತ್ವ ಬದಲಾವಣೆಯಾಗಿದೆ. 2019ರಿಂದ ಐಪಿಎಲ್ ನಲ್ಲಿ ಆಡುತ್ತಿರುವ ಋತುರಾಜ್, ಐಪಿಎಲ್ 2021ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಒಂದು ಋತುವಿನಲ್ಲಿ 635 ರನ್ ಗಳನ್ನು ಗಳಿಸಿದ್ದಾರೆ‌. ಏಷ್ಯನ್ ಗೇಮ್ ನಲ್ಲಿ ಗಾಯಕ್ವಾಡ್ ಮೂರು ಟಿ 20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನೆಡೆಸಿದ್ದಾರೆ. ಅಲ್ಲಿ ಭಾರತ ಟ್ರೋಫಿ ಗೆದ್ದಿದೆ.

ಐಪಿಎಲ್ 2024 ಪ್ರಾರಂಭವಾಗುವ ಮುನ್ನವೇ ಎಂ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ ಗೆ ಹಸ್ತಾಂತರಿಸಿದ್ದಾರೆ. ಋತುರಾಜ್ 2019 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಎಂ ಎಸ್ ಧೋನಿ 2022ರಲ್ಲಿ ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರ ಮಾಡಿದ್ದರು. ಆ ವೇಳೆಯಿಂದಾನೇ ಸಿ ಎಸ್ ಕೆ ಧೋನಿಯ ಉತ್ತರಾಧಿಕಾರಿಯ ಹುಡುಕಾಟ ಶುರು ಮಾಡಿತ್ತು. ಆದರೆ ಅದರಲ್ಲಿ ಸಿ ಎಸ್ ಕೆ ವಿಫಲಗೊಂಡಿತ್ತು. ಅಪೇಕ್ಷಣೀಯ ಫಲಿತಾಂಶಗಳನ್ನು ಪಡೆಯುವಲ್ಲಿ ವಿಫಲವಾದಾಗ ಹಡೇಜಾ ಅವರಿಂದ ಧೋನಿ ಮತ್ತೆ ಅಧಿಕಾರ ಪಡೆದುಕೊಂಡಿದ್ದರು. ಕಳೆದ ವರ್ಷದ ಐಪಿಎಲ್ ನಲ್ಲಿ ಧೋನಿ ತಮ್ಮ ಸಿ ಎಸ್ ಕೆ ತಂಡವನ್ನು ಐದನೇ ಬಾರಿಗೆ ಪ್ರಶ್ತಿ ಗೆಲ್ಲುವ ಮೂಲಕ ಮುನ್ನೆಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *