ಆರಾಧನೆಗೂ ಮುನ್ನ ಕೋಟಿ ಕೋಟಿ ಸಂಗ್ರಹ : ರಾಯರ ಮಠದಲ್ಲಿ ಇಂದು ಹುಂಡಿ ಎಣಿಕೆ..!

1 Min Read

ರಾಯರಿಗೆ ಭಕ್ತರು ಕಡಿಮೆ ಏನು ಇಲ್ಲ. ಬೇರೆ ಬೇರೆ ರಾಜ್ಯದಿಂದಾನೂ ಭಕ್ತರು ಬರುತ್ತಾರೆ. ರಾಯರನ್ನು ನಂಬಿದ ಭಕ್ತರನ್ನು ಯಾವತ್ತು ಕೈ ಬಿಡಲ್ಲ ಎಂಬ ಮಾತಿದೆ. ಅದೇ ಕಾರಣಕ್ಕಾಗಿಯೇ ಒಮ್ಮೆ ಹೋದವರು ಕೂಡ ರಾಯರ ಮಠಕ್ಕೆ ಆಗಾಗ ಹೋಗ್ತಾ ಇರ್ತಾರೆ. ಇಂದು ಹುಂಡಿ ಎಣಿಕೆ ಕಾರ್ಯವನ್ನು ಮಾಡಿದ್ದು, ನಿರೀಕ್ಷೆಗೂ ಮೀರಿ ಹಣ, ಚಿನ್ನ, ಬೆಳ್ಳಿ ಸಂಗ್ರಹವಾಗಿದೆ. ಆರಾಧನೆಗೆ ಇನ್ನು ಸಮಯ ಇರುವಾಗಲೇ ಕೋಟಿ ಕೋಟಿ ಹಣ ಸಂಗ್ರಹವಾಗಿದೆ.

ಇದೇ ಮೊದಲ ಬಾರಿಗೆ 5.46 ಕೋಟಿ ಹಣ ಸಂಗ್ರಹವಾಗಿದೆ. ಕಳೆದ 35 ದಿನಗಳಲ್ಲಿ ಒಟ್ಟಯ 5,46,06,555 ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. ಅದರಲ್ಲಿ 5,30,92,555 ರೂಪಾತಿ ನೋಟುಗಳು ಹಾಗೇ 15,14,000 ನಾಣ್ಯಗಳು, 127 ಗ್ರಾಂ ಚಿನ್ನ, 1820 ಗ್ರಾಂ ಬೆಳ್ಳಿ ನಾಣ್ಯಗಳನ್ನು ಕೂಡ ಭಕ್ತರು ಭಕ್ತಿ ರೂಪದಲ್ಲಿ ಕಾಣಿಕೆ ಹುಂಡಿಗೆ ಹಾಕಿದ್ದಾರೆ.

ಜೂನ್ ತಿಂಗಳಲ್ಲಿ ಒಟ್ಟು 5 ಕೋಟಿ 28 ಲಕ್ಷ 39,538 ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಆ ದಾಖಲೆಯನ್ನು ಮುರಿದು ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕರ ಸೇವಕರು, ಮಠದ ಭಕ್ತರು, ಮಠದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿರುವುದಾಗಿ ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ. ಇನ್ನು ರಾಯರ ಆರಾಧನೆಗೆ ಇನ್ನು ಕೆಲವೇ ದಿನಗಳು ಇದೆ. ರಾಯರ ಆರಾಧನೆಗೆ ಹೋಗಬೇಕು ಅನ್ನೋದು ಕೋಟ್ಯಾಂತರ ಭಕ್ತರ ಆಸೆಯಾಗಿರುತ್ತೆ. ಈ ಸಮಯದಲ್ಲೂ ರಾಯರಿಗೆ ಹರಕೆ‌ ಮಾಡಿಕೊಂಡ ಹರಕೆಯನ್ನು ಕಾಣಿಕೆ ರೂಪದಲ್ಲಿ ತೀರಿಸುವ ಪದ್ಧತಿ ರೂಢಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks