ಬೆಳೆ ನಷ್ಟ : ರೈತರು ಆತ್ಮಹತ್ಯೆ ಮಾಡಿಕೊಂಡಾಗ ಕೊಡುವ ಪರಿಹಾರ ಬದುಕಿದ್ದಾಗಲೆ ಕೊಡಿ : ರೈತರ ಅಳಲು

1 Min Read

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ,
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 24 : ತಾಲೂಕಿನಲ್ಲಿ ಸುಮಾರು 2200 ಹೆಕ್ಟರ್ ಭೂಮಿಯಲ್ಲಿ ನಾಟಿ ಮಾಡಲಾಗಿದ್ದ ಈರುಳ್ಳಿ ಬೆಳೆಗಾರರಿಗೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಕೈಗೆ ಬಂದ ಬೆಳೆ ಬಾಯಿಗೆ ಸಿಗದಂತಾಗಿದೆ. ಮಾರುಕಟ್ಟೆಯಲ್ಲಿ ಒಂದು ಪಾಕೆಟ್‌ಗೆ 2 ಸಾವಿರ ತನಕ ಒಳ್ಳೆಯ ರೇಟಿದೆ. ಆದರೆ, ಜಮೀನಿನಲ್ಲಿ ಕಟಾವು ಮಾಡಿಕೊಂಡ ಈರುಳ್ಳಿಯನ್ನು ಮಳೆಯಿಂದ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ಒಂದು ಸವಾಲಾಗಿ ಪರಿಣಮಿಸಿದೆ.

ತಾಲೂಕಿನ ವಿಡುಪನಕುಂಟೆ ಗ್ರಾಮದ ರೈತ ಇ. ರಾಜಣ್ಣ ಜೂನ್ ತಿಂಗಳಲ್ಲಿ ಮೂರು ಎಕರೆ ಜಮೀನಿನಲ್ಲಿ 6 ಕೆಜಿ ಈರುಳ್ಳಿ ನಾಟಿ ಮಾಡಲಾಗಿತ್ತು. ಕಟಾವು ಮಾಡಿರುವ ಪರಿಸ್ಥಿತಿಯಲ್ಲಿ ಅತಿಯಾದ ಮಳೆಯಿಂದ ಶೇ.60 ರಷ್ಟು ಈರುಳ್ಳಿ ಮಳೆನೀರು ಪಾಲಾಗಿದೆ. 2 ರಿಂದ 3 ಲಕ್ಷ ಖರ್ಚು ಮಾಡಿಕೊಂಡು ಬೆಳೆ ಪೋಷಣೆ ಮಾಡಿಕೊಳ್ಳಲಾಗಿತ್ತು. ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಇದೆ ಈ ಸಮಯದಲ್ಲೂ ರೈತರಿಗೆ ಈರುಳ್ಳಿ ಬೆಳೆ ನಷ್ಟವಾಗಿದೆ. ಸಾಲಕ್ಕೆ ಸಿಲುಕಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರ ನೀಡುವುದು ಮುಖ್ಯವಲ್ಲ. ಸಾಲಗಾರರಾದ ರೈತರಲ್ಲಿ ಕೃಷಿ ಚಟುವಟಿಕೆ ಉತ್ಸಾಹ ತುಂಬಲು ಮತ್ತು ಕುಟುಂಬ ರಕ್ಷಣೆ ಮಾಡಲು ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ವಿತರಣೆ ಮಾಡಬೇಕು ಎಂದು ಇ.ರಾಜಣ್ಣ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *