ತುಮಕೂರು: ಇಂದು ಕೊರಟಗೆರೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಕ್ತಿ ಪ್ರದರ್ಶನ ತೋರಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಕೊರಟಗೆರೆಯಲ್ಲಿ ಈ ಬಾರಿಯೂ ಪರಮೇಶ್ವರ್ ಗೆದ್ದು, ಮುಖ್ಯಮಂತ್ರಿ ಪಟ್ಟಕ್ಕೇರುವ ನಿರೀಕ್ಷೆ ಹೊಂದಿದ್ದಾರೆ. ಕಳೆದ ಬಾರಿಯ ಸೋಲಿಗೆ ಪರಮೇಶ್ವರ್, ಮತ್ತೆ ಜನರ ಆಶೀರ್ವಾದ ಕೇಳಿದ್ದಾರೆ. ಚುನಾವಣಾ ಹಿನ್ನೆಲೆ ಇಂದು ಕಾಂಗ್ರೆಸ್ ನಾಯಕರು ಬೃಹತ್ ಸಮಾವೇಶ ನಡೆಸಿದ್ದಾರೆ.
ಕೊರಟಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಖರ್ಗೆ, ಸರ್ಕಾರಿ ಕಾರು, ಸರ್ಕಾರಿ ವಿಮಾನ ಬಳಕರ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು ಎಷ್ಟು ಸರಿ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ಮೋದಿ ಎರಡು ಕಲಬುರಗಿಗೆ ಬಂದು ಹೋಗಿದ್ದಾರೆ. ಎರಡು ಕಡೆಯಲ್ಲಿ ಭಾಷಣ ಮಾಡಿದ್ದಾರೆ. ಅವರಲ್ಲಿ ಅಧಿಕಾರವಿದೆ. ಪಾಪ ಭಾಷ ಮಾಡಲಿ. ಅಧಿಕಾರ ಕೊಟ್ಟಾಗ ಅಭಿವೃದ್ಧಿ ಮಾಡುವ ಬದಲಾಗಿ ಟೀಕೆ ಟಿಪ್ಪಣಿಗೆ ಬಿಜೆಪಿ ಸೀಮಿತವಾಗಿದೆ. ಮೋದಿ ಅಧಿಕಾರದ ಕೈಕೆಳಗೇನೆ ಭ್ರಷ್ಟಾಚಾರ ನಡೆಯುತ್ತಿದೆ. ಕೆಂದ್ರ ಮತ್ತು ರಾಜ್ಯ ಸೇರಿದ್ರೆ 100% ಭ್ರಷ್ಟಾಚಾರ ನಡೆಯುತ್ತದೆ.
ನಾನು ಹನ್ನೊಂದು ಬಾರು ಚುನಾವಣೆಗೆ ನಿಂತಿದ್ದೇನ. ಆದರೆ ಇಂತಹ ಭ್ರಷ್ಟಾಚಾರ ಎಂದು ನೋಡಿಲ್ಲ ಎಂದು ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸದ್ಯ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಕಾಂಗ್ರೆಸ್ ನಾಯಕರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ.